ಮಂಗಳೂರು: ಆಕ್ಸಿಜನ್ ಕೊರತೆಯಿಂದ ಸಂಕಷ್ಟದಲ್ಲಿರುವ ಭಾರತಕ್ಕೆ ಕುವೈತ್ನ ಭಾರತೀಯ ಸಮುದಾಯವನ್ನು ಬೆಂಬಲಿಸುವ ಗುಂಪು ನೆರವಿನ ಹಸ್ತ ಚಾಚಿದೆ.
ಕುವೈತ್ನಿಂದ ಇಂದು ಮಂಗಳೂರಿಗೆ ಆಕ್ಸಿಜನ್ ಮತ್ತು ವೈದ್ಯಕೀಯ ಉಪಕರಣಗಳ ಆಗಮನವಾಗಿದೆ. ಕುವೈತ್ನ ಭಾರತೀಯ ಸಮುದಾಯ ಬೆಂಬಲಿಸುವ ಗುಂಪು ಇದನ್ನು ಕೊಡುಗೆಯಾಗಿ ನೀಡಿದೆ. ಭಾರತೀಯ ನೌಕಾಪಡೆಯ ಐಎನ್ಎಸ್ ಶಾರ್ದೂಲ್ ಹಡಗಿನಲ್ಲಿ ಇಂದು ಬೆಳಗ್ಗೆ ವೈದ್ಯಕೀಯ ಸಲಕರಣೆಗಳು ಮಂಗಳೂರು ತಲುಪಿವೆ.
ಇದರಲ್ಲಿ 11 ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್, 2 ಸೆಮಿ ಟ್ರೈಲರ್, 1,200 ಆಕ್ಸಿಜನ್ ಸಿಲಿಂಡರ್ ಒಳಗೊಂಡಿದೆ. ನವಮಂಗಳೂರು ಬಂದರಿಗೆ ವೈದ್ಯಕೀಯ ನೆರವು ಹೊತ್ತ ಹಡಗು ಆಗಮಿಸುತ್ತಿದ್ದಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶಾಂತರಾಮ್ ಶೇಟ್, ಕಾರ್ಯದರ್ಶಿ ಪ್ರಭಾಕರ್ ಶರ್ಮ, ರಾಜ್ಯ ಆಡಳಿತ ಸಮಿತಿ ಸದಸ್ಯ ಯತೀಶ್ ಬೈಕಂಪಾಡಿ ಸ್ವೀಕರಿಸಿದರು.
ಓದಿ : ಕೊರೊನಾ ನಿಯಂತ್ರಣ, ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆ ಕಾರ್ಯ ಮಹತ್ವದ್ದು: ವಿ.ಪೊನ್ನುರಾಜ್
ಈ ಸಂದರ್ಭದಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ, ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಎಸಿಪಿ ಮಹೇಶ್ ಕುಮಾರ್ ಮತ್ತು ಕೋಸ್ಟ್ ಗಾರ್ಡ್ ಕಮಾಂಡರ್ ವೆಂಕಟೇಶ್ ಉಪಸ್ಥಿತರಿದ್ದರು.