ETV Bharat / state

ತಾಂತ್ರಿಕ ಸಮಸ್ಯೆ: 12 ಗಂಟೆ ತಡವಾಗಿ ದುಬೈಗೆ ಪ್ರಯಾಣ ಬೆಳೆಸಿದ ವಿಮಾನ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳುವ ವಿಮಾನ ತಾಂತ್ರಿಕ ಸಮಸ್ಯೆದಿಂದಾಗಿ 12 ಗಂಟೆ ತಡವಾಗಿ ಪ್ರಯಾಣ ಬೆಳಸಿರುವ ಘಟನೆ ಬೆಳಕಿಗೆ ಬಂದಿದೆ.

Mangaluru to Dubai flight 12 hours delayed, Mangaluru Dubai flight 12 hours delayed in Mangalore airport, Mangalore International airport news, 12 ಗಂಟೆ ತಡವಾಗಿ ಪ್ರಯಾಣ ಬೆಳಸಿದ ಮಂಗಳೂರು ಟು ದುಬೈ ವಿಮಾನ, ಮಂಗಳೂರು ವಿಮಾನ ನಿಲ್ದಾಣದಲ್ಲಿ 12 ಗಂಟೆಗಳು ನಿಂತ ಮಂಗಳೂರು ದುಬೈ ವಿಮಾನ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸುದ್ದಿ,
12 ಗಂಟೆ ತಡವಾಗಿ ದುಬೈಗೆ ಪ್ರಯಾಣ ಬೆಳೆಸಿದ ವಿಮಾನ
author img

By

Published : Jan 27, 2022, 11:44 AM IST

ಮಂಗಳೂರು; ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ಬೆಳಗ್ಗೆ ದುಬೈಗೆ ಸಂಚರಿಸಬೇಕಾಗಿದ್ದ ವಿಮಾನ 12 ಗಂಟೆಗಳ ಕಾಲ ತಡವಾಗಿ ಪ್ರಯಾಣ ಬೆಳೆಸಿದ ಪರಿಣಾಮ ಪ್ರಯಾಣಿಕರು ಸಂಕಷ್ಟಕ್ಕೊಳಗಾದರು.

ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಹೀಗಾಗಿದೆ. ಬುಧವಾರ ಬೆಳಗ್ಗೆ 6 ಗಂಟೆಗೆ ಹೊರಡಬೇಕಿದ್ದ ಏರ್‌ಇಂಡಿಯಾ ಐಎಕ್ಸ್ 383 ವಿಮಾನ ತಾಂತ್ರಿಕ ಸಮಸ್ಯೆ ಕಾರಣದಿಂದ 12 ಗಂಟೆ ತಡವಾಗಿ ಸಂಜೆ 6 ಗಂಟೆಗೆ ದುಬೈಗೆ ತೆರಳಿತು.

ಓದಿ: ಜೈಲಿನಲ್ಲಿ ರೌಡಿಗಳಿಂದ ಅವ್ಯವಹಾರ ಆರೋಪ: ಪ್ರಾಥಮಿಕ ವರದಿ ಸಲ್ಲಿಸಿದ ಜೈಲಾಧಿಕಾರಿ

ವಿಮಾನದಲ್ಲಿ ತಾಂತ್ರಿಕ ದೋಷ ಇರುವುದು ಕಂಡು ಬಂದಿರುವುದನ್ನು ತಕ್ಷಣ ಗಮನಿಸಿದ ತಾಂತ್ರಿಕ ಅಧಿಕಾರಿಗಳು ವಿಮಾನ ಹಾರಾಟವನ್ನು ತಡೆಹಿಡಿದು ಸಂಚಾರವನ್ನೇ ಮುಂದೂಡಿದರು. ಇದರಿಂದ ದುಬೈಗೆ ತೆರಳಬೇಕಿದ್ದ 89 ಪ್ರಯಾಣಿಕರು ಸಮಸ್ಯೆಗೊಳಗಾದರು.

ಏರ್‌ ಇಂಡಿಯಾ ವಿಮಾನ ವಿಳಂಬವಾಗಿ ಹೊರಡುವ ಕಾರಣದಿಂದ ಅಧಿಕಾರಿಗಳು ಪ್ರಯಾಣಿಕರನ್ನು ಮರಳಿ ಮನೆಗೆ ಕಳುಹಿಸಿ ಮತ್ತೆ ಕರೆತರುವ ವ್ಯವಸ್ಥೆ ಮಾಡಿಸಿದರು. ಅಲ್ಲೇ ಉಳಿದುಕೊಂಡ ಪ್ರಯಾಣಿಕರಿಗೆ ಆಹಾರ ಮತ್ತಿತರ ವ್ಯವಸ್ಥೆ ಕಲ್ಪಿಸಿದರು. ತಾಂತ್ರಿಕ ಸಮಸ್ಯೆ ಬಗೆಹರಿದ ಬಳಿಕ ಸಂಜೆ 6 ಗಂಟೆಗೆ ವಿಮಾನ ದುಬೈಗೆ ತೆರಳಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.