ETV Bharat / state

ಡ್ರಗ್ಸ್ ಪ್ರಕರಣ: ಎನ್​ಸಿಬಿ ವಶದಲ್ಲಿದ್ದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು - ಕಿರುತೆರೆ ನಿರೂಪಕಿ ಅನುಶ್ರೀ

ಕಿರುತೆರೆ ನಿರೂಪಕಿ ಅನುಶ್ರೀಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಬೇಕೆಂದು ನಿನ್ನೆ ನೋಟಿಸ್ ನೀಡಿದ್ದರು. ಆದರೆ ಇಂದು ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆ ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸಲು ಕರೆದೊಯ್ಯಲಾಯಿತು‌.

Drugs case
ಡ್ರಗ್ಸ್ ಪ್ರಕರಣ
author img

By

Published : Sep 25, 2020, 4:18 PM IST

ಮಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಎನ್​ಸಿಬಿ ವಶದಲ್ಲಿದ್ದ ಆರೋಪಿಗಳಾದ ಕಿಶೋರ್ ಅಮನ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್​ರನ್ನು ಕೋರ್ಟ್​ಗೆ ಹಾಜರು ಪಡಿಸಲು ಕರೆದೊಯ್ಯಲಾಗಿದೆ.

ನಗರದ ಪಾಂಡೇಶ್ವರದಲ್ಲಿರುವ ಇಕೊನಾಮಿಕ್ ಆ್ಯಂಡ್ ಎನ್​ಸಿಬಿ ಪೊಲೀಸರು ಆರೋಪಿಗಳನ್ನು ಕರೆದೊಯ್ದಿದ್ದಾರೆ. ಇವರ ಜೊತೆಯಲ್ಲಿ ಹೆಸರು ಕೇಳಿಬರುತ್ತಿರುವ ಕಿರುತೆರೆ ನಿರೂಪಕಿ ಅನುಶ್ರೀಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಬೇಕೆಂದು ನಿನ್ನೆ ನೋಟಿಸ್ ನೀಡಿದ್ದರು. ಆದರೆ ಇಂದು ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆ ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸಲು ಕರೆದೊಯ್ಯಲಾಯಿತು‌.

ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸಲು ಕರೆದೊಯ್ದ ಪೊಲೀಸರು

ಮೊದಲು ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ಬಳಿಕ ಮಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗುತ್ತದೆ. ತನಿಖೆಗಾಗಿ ಏಳು ದಿನಗಳ ಕಾಲ ಆರೋಪಿಗಳಾದ ಕಿಶೋರ್ ಅಮನ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್​ರನ್ನು ಎನ್​ಸಿಬಿ ಪೊಲೀಸರ ವಶಕ್ಕೆ ನೀಡಲಾಗಿತ್ತು. ಇದೀಗ ವಿಚಾರಣೆ ಮುಗಿದ ಹಿನ್ನೆಲೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.