ETV Bharat / state

ಮಂಗಳೂರು ವಿವಿ ಪ್ರಾಧ್ಯಾಪಕ ಪ್ರೊ.ಉದಯ ಬಾರ್ಕೂರು ನಿಧನ! - Mangalore

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಉದಯ ಬಾರ್ಕೂರು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

professor  Udaya Barkur
ಪ್ರೊ.ಉದಯ ಬಾರ್ಕೂರು
author img

By

Published : Aug 12, 2023, 10:18 AM IST

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಉದಯ ಬಾರ್ಕೂರು (59) ಶುಕ್ರವಾರ ಸಂಜೆ‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಾರ್ಕೂರು ಅವರು ಮಂಗಳೂರು ವಿವಿಯಲ್ಲಿ ಕಳೆದ 34 ವರ್ಷಗಳಿಂದ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ವಿಭಾಗದ ಮುಖ್ಯಸ್ಥರಾಗಿ, ವಿವಿಯ ಸಿಂಡಿಕೇಟ್ ಸದಸ್ಯರಾಗಿ, ಕಲಾ ವಿಭಾಗದ ಡೀನ್ ಆಗಿ ವಿವಿಧ ಜವಬ್ದಾರಿಗಳನ್ನು ನಿರ್ವಹಿಸಿದ್ದರು. ಅಲ್ಲದೇ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

2017ರಲ್ಲಿ ಮಂಗಳೂರು ವಿವಿಯಿಂದ ಉತ್ತಮ ಪ್ರಾಧ್ಯಾಪಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ಸೌತ್ ಇಂಡಿಯನ್ ಕಾಂಗ್ರೆಸ್, ಕರ್ನಾಟಕ ಹಿಸ್ಟರಿ ಕಾಂಗ್ರೆಸ್​ನ ಸದಸ್ಯರಾಗಿದ್ದ ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನ ಮತ್ತು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ಇತಿಹಾಸ ತಜ್ಞನಾಗಿ ಗುರುತಿಸಿದ್ದ ಇವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಪಿಹೆಚ್‌ಡಿ ಪದವಿ ಪಡೆದುಕೊಂಡಿದ್ದಾರೆ.

ವಸಾಹತುಶಾಹಿ ಇತಿಹಾಸ ಚರಿತ್ರೆಯ ವಾಸ್ತವ, ಟಿಪ್ಪು- ಹೈದರಾಲಿ ಇತಿಹಾಸ ಕಥನ, ಹಿಸ್ಟರಿಯಾಗ್ರಫಿ ಆಫ್ ತುಳು ಕಲ್ಚರ್ ಆಂಡ್ ಹಿಸ್ಟರಿ, ಕೊಲೊನಿಯಲಿಸಂ ಆಂಡ್ ನ್ಯಾಷನಲಿಸಂ ಇನ್ ಮಾಡರ್ನ್ ಏಷಿಯಾ, ಇತಿಹಾಸದ ಶೋಧ - ಗತದ ಹುಡುಕಾಟ ಕೃತಿ ಸೇರಿದಂತೆ ಅನೇಕ ಅಮೂಲ್ಯ ಇತಿಹಾಸ ಗ್ರಂಥಗಳನ್ನು‌ ಪ್ರಕಟಿಸಿದ್ದಾರೆ.‌ ಪ್ರೊ.ಉದಯ ಬಾರ್ಕೂರು ಇತ್ತೀಚೆಗೆಷ್ಟೇ ವಿಶ್ವವಿದ್ಯಾನಿಲಯದ ನೆಹರೂ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನೇಮಕಗೊಂಡಿದ್ದರು.

ಇದನ್ನೂ ಓದಿ: ಶಟಲ್ ಆಡುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹೃದಯಾಘಾತವಾಗಿ ಕೋರ್ಟ್​ ಅಟೆಂಡರ್ ಸಾವು: ರಾಮನಗರದ ಕೋರ್ಟ್ ಆವರಣದಲ್ಲಿ 36 ವರ್ಷದ ಅಟೆಂಡರ್ ಕುಳಿತ ಭಂಗಿಯಲ್ಲೇ ಮೃತಪಟ್ಟಿರುವ ಘಟನೆ ನಿನ್ನೆ ನಡೆದಿತ್ತು. ಪಟ್ಟಣದ ಜಿಲ್ಲಾ‌ ಮತ್ತು ಸತ್ರ ನ್ಯಾಯಲಯದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಮಧು, ಕೋರ್ಟ್ ಆವರಣದಲ್ಲಿಯೇ ಸಾವನ್ನಪ್ಪಿದ್ದರು ನಕಪುರ ತಾಲೂಕಿನ ಬೂದನಗುಪ್ಪೆ ಗ್ರಾಮದ ನಿವಾಸಿ 36 ವರ್ಷದ ಮಧು ಮೃತರು. ಸ್ಥಳಕ್ಕೆ ರಾಮನಗರದ ಐಜೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದರು.

ಹೃದಯಾಘಾತದಿಂದ ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಸಾವು: ಮತ್ತೊಂದೆಡೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಾಡಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಕರ್ತವ್ಯದಲ್ಲಿದ್ದ ಪಶು ವೈದ್ಯಕೀಯ ಸಹಾಯಕ ನಿರ್ದೇಶಕರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನಪ್ಪಿದ್ದರು. ಬಾಬುಗೌಡ(54) ಮೃತರು. ಕಳೆದ 2 ದಿನದ ಹಿಂದೆ ಮಾಡಬಾಳು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ: ರಾಮನಗರ: ಹೃದಯಾಘಾತವಾಗಿ ಕೋರ್ಟ್​ ಅಟೆಂಡರ್ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.