ETV Bharat / state

150 ವರ್ಷಗಳ ಬಳಿಕ ಹಕ್ಕುಪತ್ರ ಪಡೆದ ಕೊರಗ ಕುಟುಂಬ! - mla Umanatha Kotian

ಮಂಗಳೂರಿನ ಕಟೀಲು-ಉಲ್ಲಂಜೆ-ಕಿನ್ನಿಗೋಳಿ ಹೆದ್ದಾರಿ ಸಮೀಪ ಕಳೆದ 150 ವರ್ಷಕ್ಕಿಂತಲೂ ಹೆಚ್ಚು ಕಾಲ ವಾಸವಿದ್ದ ಕಂಬೊಲಿ ಕೊರಗ ಕುಟುಂಬದ ಕನಸು ನನಸಾಗಿದೆ.

koraga family
ಹಕ್ಕುಪತ್ರ ಪಡೆದ ಕೊರಗ ಕುಟುಂಬ
author img

By

Published : Nov 23, 2022, 11:04 AM IST

ಮಂಗಳೂರು: 150 ವರ್ಷಗಳಿಗಿಂತಲೂ ಹೆಚ್ಚು ಕಾಲ ಕಟೀಲು ಸಮೀಪದಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಬಡ ಕುಟುಂಬವೊಂದು ಕೊನೆಗೂ ಹಕ್ಕುಪತ್ರ ಪಡೆದುಕೊಂಡಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆಮಾಡಿದೆ.

ಕಟೀಲು-ಉಲ್ಲಂಜೆ-ಕಿನ್ನಿಗೋಳಿ ಹೆದ್ದಾರಿ ಸಮೀಪ ಕಳೆದ ಒಂದೂವರೆ ಶತಮಾನಕ್ಕಿಂತಲೂ ಹೆಚ್ಚು ಕಾಲ ವಾಸವಿದ್ದ ಕಂಬೊಲಿ ಕೊರಗ ಕುಟುಂಬಕ್ಕೆ ಕೊನೆಗೂ ಭೂಮಿಯ ಹಕ್ಕುಪತ್ರ ಸಿಕ್ಕಿದೆ. ಈ ಕುಟುಂಬ ತನ್ನ ಅಜ್ಜ, ಅಜ್ಜಿ ಪಾರ ಕೊರಗ ಮತ್ತು ಸೀಗೆ ಕೊರಗರ ಕಾಲದಿಂದ ವಾಸಿಸುತ್ತಿದೆ. ಸರ್ಕಾರಿ ಜಮೀನಿನಲ್ಲಿ ಅಂದಿನಿಂದ ವಾಸಿಸುತ್ತಿದ್ದ ಕುಟುಂಬಕ್ಕೆ ಕಳೆದ 100 ವರ್ಷಗಳಲ್ಲಿ ಅನೇಕ ಸರ್ಕಾರಗಳು, ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ಹೋದರೂ ಕೂಡ ಹಕ್ಕು ಪತ್ರ ಎಂಬುವುದು ಕನಸಾಗಿಯೇ ಉಳಿದಿತ್ತು. ಆದರೆ, ಈ ಬಾರಿ ಮಾಡಿದ ಪ್ರಯತ್ನ ಮಾತ್ರ ವ್ಯರ್ಥವಾಗಿಲ್ಲ.

ಇದನ್ನೂ ಓದಿ: 'ನಮ್ಮೂರಿಗೆ ಯಾರೂ ಕನ್ಯೆ ಕೊಡ್ತಿಲ್ಲ' ಅಂತಿದ್ದವ್ರಿಗೆ ಕೊನೆಗೂ ಸಿಕ್ತು ಮನೆ ಹಕ್ಕುಪತ್ರ: ಈಟಿವಿ ಭಾರತ ಫಲಶ್ರುತಿ

ಕೊರಗ ಕುಟುಂಬಸ್ಥರು ತಮ್ಮ ಸಮಸ್ಯೆಯನ್ನು ಮೂಡಬಿದಿರೆಯ ಶಾಸಕ ಉಮಾನಾಥ ಕೋಟ್ಯಾನ್ ಗಮನಕ್ಕೆ ತಂದಿದ್ದರು. ಶಾಸಕರು ತೊಡಕುಗಳನ್ನು ನಿವಾರಿಸಿ, ಕೂಡಲೇ ಹಕ್ಕುಪತ್ರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅಷ್ಟೇ ಅಲ್ಲದೇ, ಹಕ್ಕುಪತ್ರ ಸಿದ್ಧವಾದ ಬಳಿಕ ಶಾಸಕರೇ ಕಂಬೊಳಿ ಅವರ ಮನೆಗೆ ತೆರಳಿ ಅದನ್ನು ನೀಡಿ, ದಂಪತಿಯನ್ನು ಸನ್ಮಾನಿಸಿದರು.

ಇದನ್ನೂ ಓದಿ: ಸರ್ಕಾರ ಹಕ್ಕುಪತ್ರ ಕೊಟ್ಟರೂ, ಸೈಟ್​ ಕಸಿದುಕೊಂಡ ಹೊಲದ ಮಾಲೀಕ.. ಗದಗ ಡಿಸಿಗೆ ರೈತರ ತರಾಟೆ

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, 'ಕಂಬೊಳಿ ಅವರ ಮನೆಗೆ ತೆರಳಿ ಹಕ್ಕುಪತ್ರ ನೀಡಿದ್ದು ಸಂತೋಷ ತಂದಿದೆ. ಕಳೆದ ಹಲವು ವರ್ಷಗಳಿಂದ ಹಕ್ಕುಪತ್ರವಿಲ್ಲದೆ ಈ ಕುಟುಂಬ ಸಂಕಷ್ಟಕ್ಕೊಳಗಾಗಿತ್ತು. ಇವರ ಮನೆ ದುರಸ್ತಿಗೆ ಪಟ್ಟಣ ಪಂಚಾಯತ್ ಮೂಲಕ 50 ಸಾವಿರ ರೂಪಾಯಿ ಒದಗಿಸಲಾಗುತ್ತಿದೆ' ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.