ಮಂಗಳೂರು: ಮೀನುಗಾರರ ಬಲೆಗೆ ಬಿದ್ದ ಅಪರೂಪದ ಎರಡು ರೆಕ್ಕೆ ಇರುವ ಪಕ್ಷಿಗಳಂತೆ ಹಾರುವ ಮೀನು.
ಎರಡು ದಿನಗಳ ಹಿಂದೆ ಮಂಗಳೂರಿನ ಧಕ್ಕೆಯ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನನ್ನು ಮೀನುಗಾರ ಲೋಕೇಶ್ ಬೆಂಗ್ರೆ ಎಂಬುವರು ಪತ್ತೆ ಹಚ್ಚಿದ್ದಾರೆ. ಈ ಮೀನಿಗೆ ಆಂಗ್ಲಭಾಷೆಯಲ್ಲಿ ಫ್ಲೈಯಿಂಗ್ ಫಿಶ್ ಮತ್ತು ತುಳುವಿನಲ್ಲಿ ಪಕ್ಕಿಮೀನು ಎಂದು ಕರೆಯುತ್ತಾರೆ.
ಈ ಮೀನುಗಳು ಹೆಚ್ಚಾಗಿ ಆಳಸಮುದ್ರದಲ್ಲಿ ಕಾಣಸಿಗುತ್ತವೆ. ಇವುಗಳಿಗೆ ಹಕ್ಕಿಗಳಂತೆ ರೆಕ್ಕೆ ಇದ್ದು, ಇವು ಸಮುದ್ರ ನೀರಿನಿಂದ ಮೇಲೆ ಬಂದು ಹಕ್ಕಿಗಳಂತೆ ಹಾರಾಡುವ ಸಾಮರ್ಥ್ಯ ಹೊಂದಿವೆ.
ಈ ಮೀನುಗಳು ಮೀನುಗಾರರ ಬಲೆಗೆ ಬೀಳುವುದು ಅಪರೂಪ. ಈ ಅಪರೂಪದ ಮೀನು ಮೀನುಗಾರರ ಬಲೆಗೆ ಬಿದ್ದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ತಹಬದಿಗೆ ಬಾರದ ವಿಧಾನಸಭೆ ಕಲಾಪ ; ಸದನವನ್ನು ಸೋಮವಾರಕ್ಕೆ ಮುಂದೂಡಿದ ಸ್ಪೀಕರ್