ETV Bharat / state

ಮಂಗಳೂರು: ಪೊಲೀಸ್ ಸಿಬ್ಬಂದಿಗೆ ಚೂರಿ ಇರಿದು ಕಳ್ಳತನದ ಆರೋಪಿ ಪರಾರಿ

ದುಬಾರಿ ಬೆಲೆಯ ವಾಚ್​​ವೊಂದನ್ನು ಮಾರಲು ಬಂದಿದ್ದ ವ್ಯಕ್ತಿಯನ್ನು ಪೊಲೀಸ್​​​ ಸಿಬ್ಬಂದಿ ವಿಚಾರಿಸಲು ಹೋದಾಗ ಆತ ಪೊಲೀಸ್​ಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

A man who came to sell an expensive watch
ಪೊಲೀಸ್ ಸಿಬ್ಬಂದಿಗೆ ಚೂರಿ ಇರಿದು ಕಳ್ಳ ಪರಾರಿ
author img

By

Published : Feb 21, 2022, 9:58 PM IST

Updated : Feb 21, 2022, 11:01 PM IST

ಮಂಗಳೂರು: ದುಬಾರಿ ಬೆಲೆಯ ವಾಚ್​ವೊಂದರ ಮಾರಾಟಕ್ಕೆ ಬಂದಿದ್ದ ವ್ಯಕ್ತಿಯನ್ನು ವಿಚಾರಿಸಲು ಹೋಗಿದ್ದ ಪೊಲೀಸ್ ಸಿಬ್ಬಂದಿಗೆ ಕಳ್ಳತನದ ಆರೋಪಿ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ನಗರದ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಸರಗೋಡು ಮೂಲದವನೆಂದು ಪರಿಚಯ ಮಾಡಿಕೊಂಡ ವ್ಯಕ್ತಿ ನಗರದ ವಾಚ್ ಅಂಗಡಿಯೊಂದಕ್ಕೆ ಸೋಮವಾರ ಸಂಜೆ 6.15ರ ಸುಮಾರಿಗೆ ಆಗಮಿಸಿದ್ದಾನೆ. ಈತ ತನ್ನ ಬಳಿಯಿದ್ದ ದುಬಾರಿ ವಾಚ್​ವೊಂದನ್ನು ಮಾರಾಟಕ್ಕೆ ಯತ್ನಿಸಿದ್ದಾನೆ. ಆತ ಅನುಮಾನಾಸ್ಪದವಾಗಿ ಕಂಡು ಬಂದಿದ್ದ ಕಾರಣ ಅಂಗಡಿಯವರು ಬಂದರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್.

ಈ ಹಿನ್ನೆಲೆಯಲ್ಲಿ ಬಂದರು ಪೊಲೀಸ್ ಠಾಣೆಯ ಸಿಬ್ಬಂದಿ ಆತನನ್ನು ವಶಕ್ಕೆ ಪಡೆಯಲು ಬಂದಿದ್ದಾರೆ. ಆಗ ಆರೋಪಿ ಹೆಡ್ ಕಾನ್​ಸ್ಟೇಬಲ್ ವಿನೋದ್ ಎಂಬುವರಿಗೆ ಚೂಪಾದ ಆಯುಧದಿಂದ ಇರಿದು ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಹರ್ಷ ಹತ್ಯೆ ಪ್ರಕರಣ: ಶಿವಮೊಗ್ಗದಲ್ಲಿ ಫೆ.23ರ ವರೆಗೆ ಕರ್ಫ್ಯೂ ಘೋಷಣೆ

ತಕ್ಷಣ ಗಾಯಾಳು ವಿನೋದ್​ ಅವರನ್ನು ಯೆನೆಪೊಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ವಾಟ್ಸ್ಆ್ಯಪ್ ಗ್ರೂಪ್​ಗಳಲ್ಲಿ ಗೊಂದಲದ ಹೇಳಿಕೆಗಳು ಕೇಳಿ ಬರುತ್ತಿವೆ. ಈ ಪ್ರಕರಣದ ಬಗ್ಗೆ ಯಾವುದೇ ಅಪಪ್ರಚಾರಗಳನ್ನು ಹರಡದಂತೆ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮನವಿ ಮಾಡಿದ್ದಾರೆ.

ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Last Updated : Feb 21, 2022, 11:01 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.