ETV Bharat / state

ಮಂಗಳೂರು: ಸಾಕು ನಾಯಿಗಳಿಗೆ ಪಾಲಿಕೆಯಿಂದ ಪರವಾನಗಿ ಪಡೆಯುವುದು ಕಡ್ಡಾಯ - ​ ETV Bharat Karnataka

ಬೀದಿ ನಾಯಿಗಳ ಹಾವಳಿಗಳು ಹೆಚ್ಚಾಗಿರುವುದರಿಂದ ಮಂಗಳೂರಿನಲ್ಲಿ‌ ಸಾಕು ನಾಯಿಗಳಿಗೆ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಮಂಗಳೂರಿನಲ್ಲಿ‌ ಸಾಕು ನಾಯಿಗಳಿಗೆ ಪರವಾನಿಗೆ
ಮಂಗಳೂರಿನಲ್ಲಿ‌ ಸಾಕು ನಾಯಿಗಳಿಗೆ ಪರವಾನಿಗೆ
author img

By ETV Bharat Karnataka Team

Published : Nov 29, 2023, 3:26 PM IST

Updated : Nov 29, 2023, 7:43 PM IST

ಸಾಕು ನಾಯಿಗಳಿಗೆ ಪಾಲಿಕೆಯಿಂದ ಪರವಾನಗಿ

ಮಂಗಳೂರು : ಹೆಚ್ಚಿನ ಜನರಿಗೆ ಶ್ವಾನಗಳೆಂದರೆ ಪ್ರೀತಿ. ನಿಯತ್ತಿನ ಪ್ರಾಣಿ ಎಂದೇ ಕರೆಯಲ್ಪಡುವ ನಾಯಿಗಳನ್ನು ಸಾಕುವುದು ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ನಾಯಿ ಮತ್ತು ಮನುಷ್ಯನ ನಡುವೆ ಒಡನಾಟ ಬಹಳ ಹಿಂದಿನದು. ನಾಯಿಯನ್ನು ಪ್ರೀತಿಯಿಂದ ಸಾಕುವ ಬಹಳಷ್ಟು ಮಂದಿ ನಮ್ಮೊಂದಿಗೆ ಇದ್ದಾರೆ. ಇದೀಗ ಮಂಗಳೂರು ನಗರದಲ್ಲಿ ಸಾಕು ನಾಯಿಗಳಿಗೆ ಪರವಾನಗಿ ಪಡೆಯಬೇಕೆಂದು ಮಂಗಳೂರು ಮಹಾನಗರ ಪಾಲಿಕೆ ಕಡ್ಡಾಯಗೊಳಿಸಿದೆ.

ಸಾರ್ವಜನಿಕರು ತಮ್ಮ ಸಾಕು ನಾಯಿಗಳಿಗೆ ಪಾಲಿಕೆಯಿಂದ ಪರವಾನಗಿ ಪಡೆಯಲು ಅರ್ಜಿ ಪ್ರತಿ ಪಡೆದುಕೊಳ್ಳಬೇಕು. ಸಾಕು ನಾಯಿಗೆ ನೀಡಲಾಗಿರುವ ಲಸಿಕಾ ದಾಖಲೆ, ಮಾಲೀಕರ ಆಧಾರ್ ಕಾರ್ಡ್, ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ, ಸಾಕು ನಾಯಿಯ 2 ಭಾವಚಿತ್ರ ಇತ್ಯಾದಿ ದಾಖಲೆಗಳನ್ನು ಸಲ್ಲಿಸಿ ಪರವಾನಗಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಮತ್ತೊಂದೆಡೆ ಈ ಆದೇಶದಿಂದ ನಗರದಲ್ಲಿ ನಾಯಿಗಳನ್ನು ಸಾಕುವವರು ಪರವಾನಗಿ ಪಡೆಯಲು ಮುಂದಾಗಬೇಕಾಗಿದೆ.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‍ಗಳಲ್ಲಿ ಈಗಾಗಲೇ ಬೀದಿ ನಾಯಿಗಳ ಹಾವಳಿಗಳು ಹೆಚ್ಚಾಗಿದ್ದು, ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಅಧಿಕವಾಗಿರುತ್ತದೆ. ಆದ್ದರಿಂದ ನಗರದ ಸಾರ್ವಜನಿಕರ ಆರೋಗ್ಯಕ್ಕೆ ತುಂಬಾ ಗಾಢವಾದ ಪರಿಣಾಮಗಳನ್ನು ಬೀರುತ್ತಿದೆ ಹಾಗೂ ನಗರದಲ್ಲಿ ರೇಬಿಸ್ ಕಾಯಿಲೆಗಳು ಹರಡುವ ಸಂಭವ ಹೆಚ್ಚಾಗಿರುತ್ತದೆ. ಈ ಎಲ್ಲ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ನಗರದಲ್ಲಿ ಸಾಕು ನಾಯಿಗಳಿಗೆ ಪರವಾನಗಿ ಪಡೆಯುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಸೂಚಿಸಿದೆ.

ಅದೇ ರೀತಿ ಸಾಕು ಪ್ರಾಣಿಗಳು ಮತ್ತು ಮರಿಗಳನ್ನು ರಸ್ತೆಯ ಬದಿಗಳಲ್ಲಿ ಬಿಡುವುದು ಹಾಗೂ ಸ್ಥಳೀಯ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವುದು ಕಂಡು ಬಂದಲ್ಲಿ ಸಾಕು ಪ್ರಾಣಿಗಳ ಮಾಲೀಕರ ವಿರುದ್ಧ ಪಾಲಿಕೆಯು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದು ಎಂದು ಮಂಗಳೂರು ಮಹಾನಗರಪಾಲಿಕೆ ಎಚ್ಚರಿಸಿದೆ.

ಪಾಲಿಕೆ ಆರೋಗ್ಯಾಧಿಕಾರಿ ಹೇಳಿದ್ದಿಷ್ಟು: ಈ ಬಗ್ಗೆ ಮಾತನಾಡಿದ‌ ಮಂಗಳೂರು‌ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಇದು ಹಿಂದಿನಿಂದಲೇ ಇರುವ ಕಾನೂನು. ಕೆಲವರು ಈ ಪರವಾನಗಿ ಪಡೆದುಕೊಂಡಿದ್ದಾರೆ. ಅಪಾರ್ಟ್ ಮೆಂಟ್ ಗಳಲ್ಲಿ ನಾಯಿಗಳನ್ನು ಸಾಕುವ ವಿಚಾರದಲ್ಲಿ ಬಹಳಷ್ಟು ದೂರುಗಳು ಪಾಲಿಕೆಗೆ ಬರುತ್ತಿದೆ. ಪ್ಲ್ಯಾಟ್ ನಲ್ಲಿ ಸಾಕು ನಾಯಿಗಳಿಗೆ ಅನುಮತಿ ನೀಡುವಾಗ ಅಪಾರ್ಟ್​​​​ಮೆಂಟ್​ನ ಸೊಸೈಟಿಯಿಂದ ನಿರಪೇಕ್ಷಣ ಪತ್ರ ಪಡೆದು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪ್ರಾಣಿ ರಕ್ಷಕಿಯ ಪ್ರತಿಕ್ರಿಯೆ ಹೀಗಿದೆ; ಪ್ರಾಣಿ ರಕ್ಷಕಿ ಉಷಾ ಸುವರ್ಣ ಅವರು ಮಾತನಾಡಿ " ನಾಯಿ ಸಾಕುವವರಿಗೆ ಇದು ಬೇಸರದ ವಿಷಯ. ಕಾನೂನಿನಿಂದ ಪ್ರಾಣಿಗಳ ಹಾವಳಿ ಅಥವಾ ಸಂಖ್ಯೆ ಕಡಿಮೆಯಾಗಲು ಸಾಧ್ಯವಿಲ್ಲ. ಅದರ ಬದಲಿಗೆ ಮನೆಯಲ್ಲಿ ನಾಯಿ ಸಾಕುವವರಿಗೆ ಉಚಿತ ಸಂತಾನ ಹರಣ ಚಿಕಿತ್ಸೆ ಕಾನೂನು ತಂದರೆ ಬಹಳ ಒಳ್ಳೆಯದು. ಆ ರೀತಿ ಮಾಡಿದರೆ ನಾಯಿಗಳ ಸಂಖ್ಯೆ ಕಡಿಮೆ ಆಗುತ್ತದೆ. ಅದು ಬೀದಿಗೆ ಬರಲು ಸಾಧ್ಯವಿಲ್ಲ.

ಈ ಕಾನೂನಿಂದ ತುಂಬಾ ಕಷ್ಟ. ಕೆಲವರು ಮನೆಯಲ್ಲಿ ನಾಯಿ ಮರಿ ಹಾಕಿದ ಕೂಡಲೇ ಬೀದಿಗೆ ತಂದು ಬಿಡುತ್ತಾರೆ. ನಾಯಿಗಳಿಗೆ ಸಂತಾನ ಹರಣದ ವೆಚ್ಚ ಭರಿಸಲು ಸಾಧ್ಯವಾಗದೇ ಹೀಗೆ ಮಾಡುತ್ತಾರೆ. ಈ ಕಾನೂನು ಯಾರು ಒಪ್ಪುವಂತದ್ದಲ್ಲ. ಈ ಕಾನೂನಿನ ಬದಲು ನಾಯಿಗಳಿಗೆ ಉಚಿತ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಪಾಲಿಕ ನೂತನ ಕಾನೂನು ಜಾರಿಗೊಳಿಸುವ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಬಳಿಕ ಕಾನೂನು ಜಾರಿ ಮಾಡಬೇಕು. ಅಂದಾಗ ಮಾತ್ರ ಬೀದಿ ನಾಯಿಗಳು ಹೆಚ್ಚಾಗುವುದನ್ನು ಕಡಿಮೆ ಮಾಡಲು ಸಾಧ್ಯ ಎಂದರು.

ಇದನ್ನೂ ಓದಿ : ಚಾಮರಾಜನಗರ: ಬಾಲಕಿಗೆ ಕುಕ್ಕಿದ ಕೋಳಿ; ಒಂದು ವಾರದಿಂದ ಶಾಲೆಗೆ ಹೋಗದ ಮಕ್ಕಳು!

Last Updated : Nov 29, 2023, 7:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.