ಮಂಗಳೂರು: ದಸರಾ ಪ್ರಯುಕ್ತ ಗೆಳೆಯರೆಲ್ಲಾ ಸೇರಿಕೊಂಡು ಪಾರ್ಟಿ ಮಾಡುತ್ತಿದ್ದ ವೇಳೆ ಗಲಾಟೆ ನಡೆದಿದ್ದು, ಓರ್ವನಿಗೆ ಚೂರಿ ಇರಿದು ಹತ್ಯೆ ಮಾಡಲಾಗಿದೆ.
ಮಂಗಳೂರಿನ ಪಂಪ್‌ವೆಲ್ ಬಳಿಯ ಸಾಯಿ ಪ್ಯಾಲೇಸ್ ಎಂಬ ಲಾಡ್ಜ್ನಲ್ಲಿ ಈ ಘಟನೆ ನಡೆದಿದೆ. ಅ.15 ರಂದು ಪ್ರಮೀತ್, ಜೇಸನ್, ಕಾರ್ತೀಕ್, ಧನುಷ್, ದುರ್ಗೇಶ್ ಮತ್ತು ಪ್ರಜ್ವಲ್ ಎಂಬ ಆರು ಮಂದಿ ಗೆಳೆಯರು ದಸರಾ ಪ್ರಯುಕ್ತ ಲಾಡ್ಜ್ನಲ್ಲಿ ಪಾರ್ಟಿ ಮಾಡುತ್ತಿದ್ದರು.
ರಾತ್ರಿ 2 ಗಂಟೆ ಸುಮಾರಿಗೆ ಜೇಸನ್ ಸುರತ್ಕಲ್ ಮತ್ತು ಧನುಷ್ ಪಚ್ಚನಾಡಿ ಎಂಬುವರ ಮಧ್ಯೆ ಜಗಳವಾಗಿದೆ.ಈ ವೇಳೆ ಜೇಸನ್ ಹರಿತವಾದ ಆಯುಧದಿಂದ ಧನುಷ್ಗೆ ಚುಚ್ಚಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ. ನಂತರ ಧನುಷ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.