ಮಂಗಳೂರು : ಕೊರಗಜ್ಜನ ಕಟ್ಟೆಯನ್ನ ಅಪವಿತ್ರಗೊಳಿಸಿ ದುಷ್ಕೃತ್ಯವೆಸಗಿದ ಆರೋಪಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಕುರಿತು ಪೊಲೀಸರು ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಮಂಗಳೂರಿನ ಮಾರ್ನಮಿಕಟ್ಟೆಯ ಕೊರಗಜ್ಜನ ಕಟ್ಟೆಯನ್ನ ಅಪವಿತ್ರಗೊಳಿಸಿದ ಪ್ರಕರಣ ನಿನ್ನೆ ಬೆಳಕಿಗೆ ಬಂದಿತ್ತು. ಕೊರಗಜ್ಜನ ಕಟ್ಟೆಯ ಕಲ್ಲಿನ ಮೂರ್ತಿಯನ್ನ ಅಪವಿತ್ರಗೊಳಿಸಿದ್ದು, ಇದು ಭಕ್ತರ ಮತ್ತು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಓದಿ: ಹೊಸ ವರ್ಷದ ಆರಂಭದಲ್ಲಿ ಬಂದ್ ಸಾಕಷ್ಟು ಜನರಿಗೆ ನಷ್ಟವಾಗಲಿದೆ : ಬಂದ್ ಮುಂದೂಡುವಂತೆ ಕರವೇ ಮನವಿ
ಇದೀಗ ಈ ಪ್ರಕರಣದ ಸಿಸಿಟಿವಿ ದೃಶ್ಯ ಪೊಲೀಸರಿಗೆ ದೊರೆತಿದೆ. ಇದರಲ್ಲಿ ಯುವಕನೊಬ್ಬ ಕೊರಗಜ್ಜನ ಗುಡಿಗೆ ಬಂದು ತೆರಳಿದ್ದಾನೆ. ಸಿಸಿಟಿವಿಯಲ್ಲಿ ದಾಖಲಾಗಿರುವಂತೆ ಈ ಘಟನೆ ಡಿಸೆಂಬರ್ 27ರ ರಾತ್ರಿ 11.40ಕ್ಕೆ ನಡೆದಿದೆ.
ಇದರ ಮರುದಿನ (ನಿನ್ನೆ) ಇದು ಬೆಳಕಿಗೆ ಬಂದಿದೆ. ಸಿಸಿಟಿವಿಯಲ್ಲಿ ದೊರೆತ ಸುಳಿವಿನ ಆಧಾರದಲ್ಲಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.