ETV Bharat / state

ನವ ಮಂಗಳೂರು ಬಂದರಿಗೆ ಐಷಾರಾಮಿ ಪ್ರವಾಸಿ ಹಡಗು MS NAUTICA ಆಗಮನ - A fifth cruise ship

MS NAUTICA ಐಷಾರಾಮಿ ಪ್ರವಾಸಿ ಹಡಗು ಇಂದು ಮುಂಜಾನೆ 6 ಗಂಟೆಗೆ NMPAಗೆ ಆಗಮಿಸಿತು.

MS NAUTICA
MS NAUTICA
author img

By

Published : Feb 7, 2023, 10:50 PM IST

ಮಂಗಳೂರು : ನವಮಂಗಳೂರು ಬಂದರಿಗೆ ಪ್ರಸ್ತುತ ಋತುವಿನ ಐದನೇ ಪ್ರವಾಸಿ ಹಡಗು MS NAUTICA ಆಗಮಿಸಿತು. ಐದನೇ ಕ್ರೂಸ್ ಹಡಗಿನಲ್ಲಿ 550 ಪ್ರಯಾಣಿಕರು ಮತ್ತು 400 ಸಿಬ್ಬಂದಿ ಇದ್ದರು. ಬರ್ತ್ ನಂಬರ್​​ 04 ರಲ್ಲಿ ಲಂಗರು ಹಾಕಿತು. ಹಡಗಿನ ಒಟ್ಟಾರೆ ಉದ್ದ 180.5 ಮೀಟರ್ ಇದ್ದು 30,277 ಒಟ್ಟು ಟನ್‌ ಸಾಗಾಟ ಸಾಮರ್ಥ್ಯ ಮತ್ತು 6.0 ಮೀಟರ್​ಗಳ ಆಳ ಹೊಂದಿದೆ.

ಮಾಲೆ (ಮಾಲ್ಡೀವ್ಸ್)ಗೆ ಹೋಗುವ ಮಾರ್ಗದಲ್ಲಿ ಹಡಗು ಮಸ್ಕತ್​​ನಿಂದ ಭಾರತಕ್ಕೆ ಬಂದಿದೆ. ಮುಂಬೈ ಮತ್ತು ಮರ್ಮಗೋವಾ ಬಳಿಕ ಮಂಗಳೂರಿಗೆ ಆಗಮಿಸಿದೆ. ಪ್ರವಾಸಿ ಹಡಗಿನಲ್ಲಿ ಬಂದ ಪ್ರಯಾಣಿಕರಿಗೆ ಯಕ್ಷಗಾನ ಮತ್ತು ಸಾಂಪ್ರದಾಯಿಕ ಡೋಲು (ಚಂಡೆ) ಮುಂತಾದ ಜಾನಪದ ಕಲಾತಂಡಗಳ ಮೂಲಕ ಆತ್ಮೀಯ ಸ್ವಾಗತ ನೀಡಲಾಯಿತು. ಕ್ರೂಸ್ ಪ್ರಯಾಣಿಕರಿಗೆ ಆಹ್ಲಾದಕರ ಅನುಭವಕ್ಕಾಗಿ ವಿವಿಧ ವ್ಯವಸ್ಥೆ ಮಾಡಲಾಗಿತ್ತು. ಪ್ರಯಾಣಿಕರ ವೈದ್ಯಕೀಯ ತಪಾಸಣೆ, ಕ್ಷಿಪ್ರ ಸಂಚಾರಕ್ಕಾಗಿ ವಲಸೆ ಮತ್ತು ಕಸ್ಟಮ್ಸ್ ಕೌಂಟರ್​ಗಳು, ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡುವ ಪ್ರಯಾಣಿಕರಿಗೆ 2 ಶಟಲ್ ಬಸ್​ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಅಂಗಡಿ, ಟ್ಯಾಕ್ಸಿ, ಪ್ರವಾಸಿ ಸ್ಥಳಗಳಿಗೆ ಕರೆದುಕೊಂಡು ಹೋಗಲಾಯಿತು. ಕ್ರೂಸ್ ಪ್ರಯಾಣಿಕರು ಕ್ರೂಸ್ ಲಾಂಜ್​ನೊಳಗೆ ಆಯುಷ್ ಇಲಾಖೆ ಸ್ಥಾಪಿಸಿದ ಧ್ಯಾನ ಕೇಂದ್ರದ ಪ್ರಯೋಜನ ಪಡೆದರು. ಪ್ರವಾಸಿಗರಿಗೆ ಬಟ್ಟೆ ಮತ್ತು ಕರಕುಶಲ ಮಳಿಗೆಗಳನ್ನು ತೆರೆಯಲಾಗಿತ್ತು.

ಪ್ರಯಾಣಿಕರು ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ವಿವಿಧ ಪ್ರವಾಸಿ ತಾಣಗಳು, ದೇವಸ್ಥಾನಗಳು, ಚರ್ಚ್​ಗಳಿಗೆ ಭೇಟಿ ನೀಡಿದರು. ಸ್ಥಳೀಯ ಮಾರುಕಟ್ಟೆ ಪ್ರದೇಶಗಳಿಗೆ ತೆರಳಿದರು. ಹಡಗು ಪ್ರಯಾಣಿಕರು ತಮ್ಮ ಹಡಗಿಗೆ ಮರಳುತ್ತಿರುವಾಗ ಮಂಗಳೂರಿಗೆ ಭೇಟಿ ನೀಡಿದ ನೆನಪಿಗಾಗಿ ಸ್ಮರಣಿಕೆಗಳನ್ನು ನೀಡಲಾಯಿತು. ಹಡಗು ತನ್ನ ಮುಂದಿನ ತಾಣ ಕೊಚ್ಚಿನ್​ಗೆ ಸಂಜೆ 4 ಗಂಟೆಗೆ ಮರುಪ್ರಯಾಣ ಬೆಳೆಸಿತು.

ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಅಣಕು ಕಾರ್ಯಾಚರಣೆ: ರಾಜ್ಯಪಾಲ ಗೆಹ್ಲೋಟ್ ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.