ETV Bharat / state

ವಿವಾದಿತ ಗೋಡೆ ಬರಹ ಪ್ರಕರಣ: ಸೌದಿಯಲ್ಲಿರುವ ಆರೋಪಿಗಳ ಬಂಧನಕ್ಕೆ ಲುಕ್​ಔಟ್​ ನೋಟಿಸ್​ ನೀಡಲು ಚಿಂತನೆ

author img

By

Published : Dec 17, 2020, 3:45 PM IST

ಉಗ್ರ ಸಂಘಟನೆ ಪರ ಗೋಡೆ ಬರಹ ಬರೆಯಲು ಸೌದಿಯಿಂದ ಪ್ರಚೋದನೆ ನೀಡಿರುವ ಬಗ್ಗೆ ಮಾಹಿತಿಯಿದೆ. ಅಂತಹ ಆರೋಪಿಗಳ ಬಂಧನಕ್ಕೆ ಲುಕ್​ ಔಟ್​ ನೋಟಿಸ್​ ನೀಡುವುದಾಗಿ ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Mangaluru Controversial wall writing case Update
ಉಗ್ರ ಪರ ಗೋಡೆ ಬರಹ ಪ್ರಕರಣ

ಮಂಗಳೂರು: ನಗರದಲ್ಲಿ ಉಗ್ರ ಸಂಘಟನೆಯ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿಯಿಂದ ಪ್ರಚೋದನೆ ಕೊಟ್ಟ ಆರೋಪಿಗಳನ್ನು ಬಂಧಿಸಲು ಲುಕ್ ಔಟ್ ನೋಟಿಸ್ ನೀಡುವ ಚಿಂತನೆಯಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ಸೌದಿಯಿಂದ ಪ್ರಚೋದನೆ:

ಈ ಕುರಿತು ಮಾತನಾಡಿದ ಅವರು, ವಿವಾದಿತ ಗೋಡೆ ಬರಹ ಬರೆದ ಆರೋಪಿಗಳಾದ ಮುಹಮ್ಮದ್ ಶಾರಿಕ್ ಮತ್ತು ಮಾಝ್ ಮುನೀರ್ ಅಹಮದ್​ನನ್ನು ಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಮುಹಮ್ಮದ್ ಶಾರಿಕ್​​ಗೆ ತಪ್ಪಿಸಿಕೊಳ್ಳಲು ಆಶ್ರಯ ನೀಡಿದ್ದ ಆತನ ಮಾವ ಸಾದಾತ್​ನನ್ನು ಬಂಧಿಸಲಾಗಿತ್ತು. ಆತನಿಗೆ ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣದ ಹಿಂದೆ ಯಾವುದೇ ಸಂಘಟನೆಯ ಕೈವಾಡ ಇರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಕೆಲವರು ಸೌದಿಯಲ್ಲಿ ಕೂತು ಪ್ರಚೋದನೆ ನೀಡಿರುವ ಬಗ್ಗೆ ಮಾಹಿತಿಯಿದೆ. ಅವರ ಬಂಧನಕ್ಕೆ ಲುಕ್​ ಔಟ್​ ನೋಟಿಸ್​ ನೀಡಲಾಗುವುದು ಎಂದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್

ಇದನ್ನೂ ಓದಿ : ಉಗ್ರರ ಪರ ಗೋಡೆ ಬರಹ ಪ್ರಕರಣ ; ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್​​

ಇನ್ನು ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ವಿಚಾರಣೆಗಾಗಿ ಎನ್​ಐಎ ತಂಡ ಬರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.