ದಕ್ಷಿಣ ಕನ್ನಡ (ಪುತ್ತೂರು): ದೇಶದಲ್ಲಿ ಉಂಟಾದ ಕೊರೊನಾ ಭೀತಿಯಿಂದ ಜನತೆ ಮನೆಯಲ್ಲಿಯೇ ಇರಬೇಕಾಗಿದೆ. ಈ ಸಂದರ್ಭದಲ್ಲಿ ಬಡಕುಟುಂಬಗಳಿಗೆ ಸಮಸ್ಯೆಗಳು ಉಂಟಾಗದಂತೆ ಕನಿಷ್ಠ ಮೂರು ಹೊತ್ತಿನ ಊಟಕ್ಕೆ ತೊಂದರೆ ಉಂಟಾಗದಂತೆ ಈ ಆಹಾರ ಸಾಮಗ್ರಿಗಳನ್ನು ನೀಡಲಾಗುತ್ತಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಉಂಟಾಗಿರುವ ಸಂಕಷ್ಟಕ್ಕೆ ದಾನಿಗಳ ಮೂಲಕ ಸಂಗ್ರಹಿಸಿದ ಸುಮಾರು 2 ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್ ಅನ್ನು ಬುಧವಾರ ಎಪಿಎಂಸಿ ಪ್ರಾಂಗಣದಲ್ಲಿ ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು.
ಪುತ್ತೂರಿನ ಅಡಕೆ ವರ್ತಕರಿಂದ 1.5 ಲಕ್ಷ ರೂ. ಮೌಲ್ಯದ ಆಹಾರ ಸಾಮಗ್ರಿಗಳು, ದಾನಿಗಳಿಂದ ಸುಮಾರು 13 ಕ್ವಿಂಟಲ್ ಅಕ್ಕಿ ಸೇರಿ ಒಟ್ಟು ಸುಮಾರು 2 ಲಕ್ಷದ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಬಂಟರ ಸಂಘದ ಮೂಲಕ 1 ಸಾವಿರ ಕುಟುಂಬಗಳಿಗೆ ಪಡಿತರ ವ್ಯವಸ್ಥೆ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.