ETV Bharat / state

ಲಾಕ್​​ಡೌನ್ ಎಫೆಕ್ಟ್: 80 ಎಕರೆ ಜಮೀನಿನಲ್ಲಿ ಅನಾನಸ್​​​​​​​ ಬೆಳೆದ ರೈತ ಕಂಗಾಲು - ಲಾಕ್​​ಡೌನ್ ಎಫೆಕ್ಟ್ ಇನ್​ ಬೆಳ್ತಂಗಡಿ

ಕೊರೊನಾದಿಂದ ದೇಶದ ಆರ್ಥಿಕತೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದು, ಯಾವುದೇ ಮಾರುಕಟ್ಟೆ ವ್ಯವಸ್ಥೆಯಿಲ್ಲದೇ ಬೆಳೆಗಾರರು, ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಸುಮಾರು 80 ಎಕರೆ ಪ್ರದೇಶದಲ್ಲಿ ಬೆಳೆದಿರುವ ಅನಾನಸ್​​ ಮಾರುಕಟ್ಟೆ ಇಲ್ಲದೇ ರೈತ ಕಂಗಾಲಾಗಿದ್ದಾನೆ.

300 ಟನ್ ಅನನಾಸ್​​ ಬೆಳೆದ ಕೃಷಿಕ ಕಂಗಾಲು
Lockdown effect: 300 tan pineapple losses at Belthangady
author img

By

Published : Apr 17, 2020, 8:28 PM IST

Updated : Apr 17, 2020, 10:58 PM IST

ಬೆಳ್ತಂಗಡಿ: ಲಾಕ್​ಡೌನ್​​ನಿಂದ ಎಲ್ಲಾ ವಲಯಗಳು ನಷ್ಟದಲ್ಲಿದ್ದು, ಜಿಲ್ಲೆಯಲ್ಲಿ ಸುಮಾರು 80 ಎಕರೆ ಪ್ರದೇಶದಲ್ಲಿ ಬೆಳೆದ ಅನಾನಸ್​ಗೆ ಮಾರುಕಟ್ಟೆ ಇಲ್ಲದೆ ರೈತನೊಬ್ಬ ಕಂಗಾಲಾಗಿದ್ದಾನೆ.

ಕೇರಳ ಮೂಲದ ಶೈಜು ಎಂಬುವವರು ಕಕ್ಕಿಂಜೆ ಅಸುಪಾಸಿನಲ್ಲಿ ಕೆಲವು ಜನರಿಂದ ಜಾಗಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದ ಸುಮಾರು 80 ಎಕರೆ ಪ್ರದೇಶದಲ್ಲಿ ವ್ಯವಸ್ಥಿತ ರೀತಿಯಲ್ಲಿ ಅನಾನಸ್​​​ ಬೆಳೆ ಬೆಳೆದಿದ್ದಾರೆ. ಬೆಳೆ ಚೆನ್ನಾಗಿ ಬಂದು ಕಟಾವಿಗೆ ಬಂದಿದೆ. ಆದರೆ ಲಾಕ್​​ಡೌನ್​​ನಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಾಗಿದೆ. ಪ್ರತಿ ಬಾರಿ ಇವರು ಬೆಳೆದ ಅನಾನಸ್​​ಗಳನ್ನು ದೆಹಲಿ, ಪೂನಾ, ಮುಂಬೈ, ಜೈಪುರ, ಅಲಹಾಬಾದ್ ಹಾಗೂ ಇನ್ನಿತರ ಕಡೆಗಳಿಗೆ ಸಾಗಿಸಿ ಲಾಭ ಪಡೆಯುತ್ತಿದ್ದರು. ಪ್ರತಿ ಬಾರಿ ಕೆಜಿಗೆ 40ರಿಂದ 50 ರೂ.ವರೆಗೆ ಮಾರಾಟವಾಗುತ್ತಿದ್ದ ಹಣ್ಣುಗಳನ್ನು ಈ ಬಾರಿ ಕೇಳುವವರಿಲ್ಲದಂತಾಗಿದೆ.

ಲಾಕ್​​ಡೌನ್​​ನಿಂದ ಸಾಗಣೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ. ದೊಡ್ಡ ಮೊತ್ತದ ಬ್ಯಾಂಕ್ ಸಾಲ ಮಾಡಿ ಈ ಬೆಳೆ ಬೆಳೆದಿರುವ ರೈತ ಈಗ ಕಣ್ಣೀರಿಡುವ ಸ್ಥಿತಿ ಎದುರಾಗಿದೆ.

Last Updated : Apr 17, 2020, 10:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.