ಮಂಗಳೂರು: ಪ್ರಧಾನಮಂತ್ರಿ ಜೊತೆ ಮಾತನಾಡಲು ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು. ಇಲ್ಲವಾದ್ರೆ 'ಗೋ ಬ್ಯಾಕ್ ಮೋದಿ' ಎಂದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಐವನ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 13ರಂದು ಜಿಲ್ಲೆಗೆ ಮೋದಿ ಆಗಮಿಸಲಿದ್ದು, ಈ ಸಂದರ್ಭದಲ್ಲಿ ವಿಜಯ ಬ್ಯಾಂಕ್ ವಿಲೀನದ ಕುರಿತು ಪ್ರಧಾನಮಂತ್ರಿಯವರ ಜೊತೆ ಮಾತನಾಡಲು ಜಿಲ್ಲಾಡಳಿತ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಗೋ ಬ್ಯಾಕ್ ಮೋದಿ ಎಂದು ಪ್ರತಿಭಟನೆ ನಡೆಸುವುದಾಗಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ವಿಜಯ ಬ್ಯಾಂಕನ್ನು ಉಳಿಸಲು ಅವಕಾಶ ನೀಡಬೇಕು. ಒಂದು ವೇಳೆ ವಿಲೀನ ಪ್ರಕ್ರಿಯೆ ಅನಿವಾರ್ಯವಾದರೆ ಕನಿಷ್ಠ ಪಕ್ಷ ಹೆಸರನ್ನಾದರೂ ಉಳಿಸಬೇಕು. ಇದ್ಯಾವುದಕ್ಕೂ ಅವಕಾಶ ಸಿಗದಿದ್ದರೆ ರಾಜ್ಯಾದಂತ್ಯ ಗೋ ಬ್ಯಾಕ್ ಮೋದಿ ಘೋಷಣೆಯನ್ನು ನಾವು ಪ್ರಾರಂಭ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.