ಸುಬ್ರಹ್ಮಣ್ಯ: ಕೋಳಿ ಹಿಡಿಯಲು ಬಂದು ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ನಡೆದಿದೆ.
ಇಲ್ಲಿನ ರಾಮಯ್ಯ ಎಂಬುವರಿಗೆ ಸೇರಿದ ಬಾವಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆಯ ರಕ್ಷಣಾ ಕಾರ್ಯಕ್ಕೆ ತಯಾರಿ ನಡೆಸಿದ್ದಾರೆ.
ಕಳೆದ ಕೆಲವು ತಿಂಗಳುಗಳ ಹಿಂದೆ ಈ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ಚಿರತೆಯೊಂದು ರಕ್ಷಣಾ ಕಾರ್ಯದ ನಡುವೆ ತಪ್ಪಿಸಿಕೊಂಡು ಹೋಗಿತ್ತು ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಮಾಗಡಿಯಲ್ಲಿ ಭೀಕರ ಅಪಘಾತ: ಬಿಇ ವಿದ್ಯಾರ್ಥಿನಿ ಸಾವು, ಹಲವರ ಸ್ಥಿತಿ ಗಂಭೀರ