ಸುಳ್ಯ(ದ.ಕನ್ನಡ) : ಸುಳ್ಯ ಸಮೀಪದ ಆಲೆಟ್ಟಿ ಎಂಬಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಕಂಡುಬಂದಿದ್ದು, ಹಾವನ್ನು ಸೆರೆ ಹಿಡಿದು ಪಿಲಿಕುಳ ನಿಸರ್ಗ ಧಾಮಕ್ಕೆ ಬಿಡಲಾಗಿದೆ.
ತಾಲೂಕಿನ ಆಲೆಟ್ಟಿ ನಿವಾಸಿ ಎಲಿಕ್ಕಳ ಶಂಕರ ಭಟ್ ಎಂಬವರ ಮನೆಯ ಸಮೀಪದಲ್ಲಿ ಕಾಳಿಂಗ ಕಂಡು ಬಂದಿತ್ತು. ಈ ಬಗ್ಗೆ ಆತಂಕಗೊಂಡ ಮನೆ ಮಾಲೀಕರು, ಉರಗ ಪ್ರೇಮಿ ಜಾಲ್ಸೂರಿನ ಶ್ಯಾಮ್ ನಾಯಕ್ ಮತ್ತು ಮೋಹನ್ ಪರಿವಾರಕಾನ ಅವರಿಗೆ ವಿಷಯ ತಿಳಿಸಿದ್ದರು.