ETV Bharat / state

ಶಕ್ತಿ ಯೋಜನೆ ಎಫೆಕ್ಟ್​: ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.. ಖಾಸಗಿ ಬಸ್​ಗಳಲ್ಲಿ ಪ್ರಯಾಣಿಕರ ಕೊರತೆ - ದಕ್ಷಿಣ ಕನ್ನಡ ಜಿಲ್ಲೆ

ಕಾಂಗ್ರೆಸ್​ನ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಯೋಜನೆಗೆ ಸಿದ್ದರಾಮಯ್ಯ ಭಾನುವಾರ ಚಾಲನೆಯನ್ನು ನೀಡಿದ್ದಾರೆ.

Private Buses Lack of female passengers for private buses
ಖಾಸಗಿ ಬಸ್​ಗಳು
author img

By

Published : Jun 12, 2023, 5:09 PM IST

Updated : Jun 12, 2023, 7:32 PM IST

ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.. ಖಾಸಗಿ ಬಸ್​ಗಳಲ್ಲಿ ಬಣ ಬಣ

ಮಂಗಳೂರು: ಸರ್ಕಾರಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಓಡಾಡುವ ಮಾರ್ಗದಲ್ಲಿ ಖಾಸಗಿ ಬಸ್​ಗಳಿಗೆ ಮಹಿಳಾ ಪ್ರಯಾಣಿಕರ ಕೊರತೆಯನ್ನು ಸೃಷ್ಟಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಗರ ಮತ್ತು ಜಿಲ್ಲೆಯಾದ್ಯಂತ ಸಂಚಾರಕ್ಕೆ ಹೆಚ್ಚಿನ ಜನರು ಖಾಸಗಿ ಬಸ್​ಗಳನ್ನು ಅವಲಂಬಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್​ಗಳ ಪ್ರಭಾವವೇ ಅಧಿಕ. ಇಲ್ಲಿನ‌ ಜನರು ನಗರದಲ್ಲಿ ಪ್ರಯಾಣಿಸಲು, ಜಿಲ್ಲೆಯಾದ್ಯಂತ ಪ್ರಯಾಣಿಸಲು ಮತ್ತು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಪ್ರಯಾಣಿಸಲು ಖಾಸಗಿ ಬಸ್​ಗಳ ಮೊರೆ ಹೋಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಬಸ್​ಗಳ ಓಡಾಟ ತೀರಾ ಕಡಿಮೆ. ಕೆಲವೊಂದು ಮಾರ್ಗದಲ್ಲಿ ಒಂದೆರಡು ನರ್ಮ್ ಬಸ್​ಗಳು ಮಾತ್ರ ಓಡಾಡುತ್ತಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಪುತ್ತೂರು, ಸುಳ್ಯ, ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ರಸ್ತೆಗಳಲ್ಲಿ ಸರ್ಕಾರಿ ಬಸ್ ಓಡಾಟವಿದೆ. ಆದರೆ ಈ ಮಾರ್ಗಗಳಲ್ಲಿ ಮಂಗಳೂರು -ಪುತ್ತೂರು, ಮಂಗಳೂರು - ಉಪ್ಪಿನಂಗಡಿ, ಮಂಗಳೂರು- ವಿಟ್ಲ ಮಾರ್ಗದಲ್ಲಿ‌ ಕಾಂಟ್ರ್ಯಾಕ್ಟ್ ಕ್ಯಾರೇಜ್ ಸೇವೆಯಡಿ ಖಾಸಗಿ ಬಸ್​ಗಳು ಸಂಚಾರ ನಡೆಸುತ್ತಿವೆ.

ರಾಜ್ಯ ಸರ್ಕಾರವು ಭಾನುವಾರದಿಂದ ಆರಂಭಿಸಿರುವ ಮಹಿಳಾ ಬಸ್ ಪ್ರಯಾಣಿಕರಿಗೆ ಆರಂಭಿಸಿದ ಶಕ್ತಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುತ್ತಿಲ್ಲ. ಇದೀಗ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಆರಂಭವಾಗಿದ್ದು, ಜಿಲ್ಲೆಯಲ್ಲಿ ಸರ್ಕಾರಿ ಬಸ್ ಓಡಾಡುವ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್​ಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ನಿತ್ಯ ಸಂಚರಿಸುವ ಮಹಿಳೆಯರು ಇಂದಿನಿಂದ ಸರ್ಕಾರಿ ಬಸ್ ನೆಚ್ಚಿಕೊಂಡಿದ್ದಾರೆ.

ಪುತ್ತೂರು ಬಸ್ ನಿರ್ವಾಹಕ ರಾಧಕೃಷ್ಣ ಮಾತನಾಡಿ, ಈಗ ಖಾಸಗಿ ಬಸ್​ನಲ್ಲಿ 75 ಶೇಕಡಾ ಮಹಿಳಾ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಇನ್ನೂ ಪ್ರಚಾರ ಆದ ನಂತರ ಹೇಗಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಇವತ್ತು ಬೆಳಗ್ಗೆಯಿಂದಲೇ ತುಂಬಾ ಪ್ರಯಾಣಿಕರು ಕಡಿಮೆಯಾಗಿದ್ದಾರೆ ಎನ್ನುತ್ತಾರೆ.

ಖಾಸಗಿ ಬಸ್ ನಿರ್ವಾಹಕ ಕಬೀರ್ ಮಾತನಾಡಿ, ಖಾಸಗಿ ಬಸ್​ನಲ್ಲಿ ಉಚಿತ ಇದೆಯಾ ಎಂದು ಪ್ರಯಾಣಿಕರು ಕೇಳುತ್ತಿದ್ದಾರೆ. ಯಾರೂ ಕೂಡ ಖಾಸಗಿ ಬಸ್​ನಲ್ಲಿ ಬರುತ್ತಾ ಇಲ್ಲ. ಬೆಳಗ್ಗೆ ಹೊತ್ತಲ್ಲಿ ಖಾಯಂ ಪ್ರಯಾಣಿಕರಲ್ಲಿ 50 ಶೇಕಡಾ ರಷ್ಟು ಮಂದಿ ಬರುತ್ತಿದ್ದಾರೆ. ಆ ಬಳಿಕ ಪ್ರಯಾಣಿಕರು ತುಂಬಾ ಕಡಿಮೆಯಾಗಿದ್ದಾರೆ ಎಂದು ತಿಳಿಸಿದರು.

ಬೆಳಗ್ಗೆ ಹೊತ್ತಿನಲ್ಲಿ‌ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಕೆಎಸ್​ಆರ್​ಟಿಸಿ ಬಸ್​ನಲ್ಲಿರುವುದರಿಂದ ಕೆಲ ಮಹಿಳಾ ಪ್ರಯಾಣಿಕರು ಮೊದಲಿನಂತೆ ಖಾಸಗಿ ಬಸ್​ಗೆ ಹೋಗುತ್ತಿದ್ದಾರೆ. ಉಳಿದಂತೆ ಈ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್​ಗಳು ಪ್ರಯಾಣಿಕರ ಕೊರತೆಯೊಂದಿಗೆ ಸಂಚಾರ ಮಾಡುತ್ತಿವೆ. ಕಾಂಗ್ರೆಸ್​ ಸರ್ಕಾರ ಚುನಾವಣಾ ಪ್ರಚಾರದ ವೇಳೆ ಘೋಷಣೆಯ ಮಾಡಿದ್ದ ಐದು ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣದ ಗ್ಯಾರಂಟಿಯನ್ನು ಈಗಾಗಲೇ ಪ್ರಾರಂಭಿಸಿದೆ.

ಇದನ್ನೂ ಓದಿ: Congress Guarantee Scheme: ಮಹಿಳೆಯರಿಗೆ ಬಹುನಿರೀಕ್ಷಿತ ಉಚಿತ ಬಸ್​ ಪ್ರಯಾಣ .. ಇಲ್ಲಿದೆ ಶಕ್ತಿ ಯೋಜನೆಯ ಸಮಗ್ರ ಚಿತ್ರಣ

Last Updated : Jun 12, 2023, 7:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.