ETV Bharat / state

ಷಷ್ಠಿ ಮಹೋತ್ಸವಕ್ಕೆ ಸಿದ್ಧಗೊಂಡ ಕುಕ್ಕೆ ಸುಬ್ರಹ್ಮಣ್ಯ - ವಾರ್ಷಿಕ ಜಾತ್ರೆ ಚಂಪಾಷಷ್ಠಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಡಿ. 1 ಮತ್ತು 2ರಂದು ನಡೆಯುವ ವಾರ್ಷಿಕ ಜಾತ್ರೆ ಚಂಪಾಷಷ್ಠಿ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ಸಿದ್ದತೆಗಳೂ ಪೂರ್ಣ
ಸಿದ್ದತೆಗಳೂ ಪೂರ್ಣ
author img

By

Published : Nov 30, 2019, 12:01 AM IST

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ದ ಕರ್ನಾಟಕದ ಪುಣ್ಯ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಡಿ. 1 ಮತ್ತು 2ರಂದು ನಡೆಯುವ ವಾರ್ಷಿಕ ಜಾತ್ರೆ ಚಂಪಾಷಷ್ಠಿ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ಚೌತಿ, ಪಂಚಮಿ ಹಾಗೂ ಷಷ್ಠಿ ದಿನಗಳಲ್ಲಿ ಕ್ಷೇತ್ರದಲ್ಲಿ ವಿಶೇಷ ಸೇವೆಯಾದ ಬೀದಿಮಡೆ ಸ್ನಾನ, ಎಡೆಮಡೆಸ್ನಾನದ ಜೊತೆಗೆ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಉಮಾಮಹೇಶ್ವರ ದೇವರಿಗೆ ರಥೋತ್ಸವಗಳು ನಡೆಯುತ್ತದೆ. ಇಲ್ಲಿ ನಡೆಯುವ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ವಿಶಿಷ್ಟ ಮಹತ್ವವೂ ಇದೆ. ಮಾತ್ರವಲ್ಲದೇ ನೂತನ ರಥದಲ್ಲಿ ದೇವರ ರಥೋತ್ಸವ ಎಂಬ ವಿಶೇಷತೆ ಈ ವರ್ಷದ ರಥೋತ್ಸವಕ್ಕೆ ಇದೆ.

ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವಕ್ಕೆ ಸಂಪೂರ್ಣ ಸಿದ್ದತೆಗಳು ಪೂರ್ಣ

ಕಾರ್ಯಕ್ರಮಗಳ ವಿವರ:
ಬೀದಿ ಮಡೆಸ್ನಾನ ಆರಂಭವಾಗಿದ್ದು, ನಾಳೆ ಎಡೆಮಡೆಸ್ನಾನ, ರಾತ್ರಿ ಹೂವಿನ ತೇರಿನ ಉತ್ಸವ ನಡೆಯಲಿದ್ದು , ಡಿ 1 ರಂದು ತೈಲಾಭ್ಯಂಜನ, ರಾತ್ರಿ ಪಂಚಮಿ ರಥೋತ್ಸವ ನಡೆಯಲಿದೆ. ಡಿ 2 ರಂದು ಬೆಳಗ್ಗೆ ಚಂಪಾಷಷ್ಠಿ ಮಹಾ ರಥೋತ್ಸವ ನಡೆಯಲಿದೆ. ಜಾತ್ರೋತ್ಸವದ ಅಂತಿಮ ದಿನವಾದ ಡಿ 3 ರಂದು ಶ್ರೀ ದೇವರ ಅವಭೃತೋತ್ಸವ , ನೌಕಾವಿಹಾರಗಳು ಜರುಗಲಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಈ ಜಾತ್ರಾ ಕಾರ್ಯಕ್ರಮಗಳನ್ನು ವೀಕ್ಷಿಸಲು ದೇಶ ಹಾಗೂ ವಿದೇಶಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿಗೆ ಭೇಟಿ ನೀಡುವುದು ವಿಶೇಷ.

Intro:ಸುಬ್ರಹ್ಮಣ್ಯ

ಇತಿಹಾಸ ಪ್ರಸಿದ್ದ ಕರ್ನಾಟಕದ ಪುಣ್ಯ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಡಿ. 1 ಮತ್ತು 2ರಂದು ನಡೆಯುವ ವಾರ್ಷಿಕ ಜಾತ್ರೆ ಚಂಪಾಷಷ್ಠಿ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.Body:ಚೌತಿ,ಪಂಚಮಿ ಹಾಗೂ ಷಷ್ಠಿ ದಿನಗಳಲ್ಲಿ ಕ್ಷೇತ್ರದಲ್ಲಿ ವಿಶೇಷ ಸೇವೆಯಾದ ಬೀದಿಮಡೆ ಸ್ನಾನ, ಎಡೆಮಡೆಸ್ನಾನದ ಜೊತೆಗೆ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಉಮಾಮಹೇಶ್ವರ ದೇವರಿಗೆ ರಥೋತ್ಸವಗಳು ನಡೆಯುತ್ತದೆ. ಇಲ್ಲಿ ನಡೆಯುವ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ವಿಶಿಷ್ಟ ಮಹತ್ವವೂ ಇದೆ. ಮಾತ್ರವಲ್ಲದೇ ನೂತನ ರಥದಲ್ಲಿ ದೇವರ ರಥೋತ್ಸವ ಎಂಬ ವಿಶೇಷತೆ ಈ ವರ್ಷದ ರಥೋತ್ಸವಕ್ಕೆ ಇದೆ.

ಕಾರ್ಯಕ್ರಮಗಳ ವಿವರಗಳು.

ಬೀದಿ ಮಡೆಸ್ನಾನ ಆರಂಭವಾಗಿದ್ದು, ನಾಳೆ ಎಡೆಮಡೆಸ್ನಾನ, ರಾತ್ರಿ ಹೂವಿನ ತೇರಿನ ಉತ್ಸವ ನಡೆಯಲಿದ್ದು , ಡಿ 1 ರಂದು ತೈಲಾಭ್ಯಂಜನ , ರಾತ್ರಿ ಪಂಚಮಿ ರಥೋತ್ಸವ ನಡೆಯಲಿದೆ. ಡಿ 2 ರಂದು ಬೆಳಿಗ್ಗೆ ಚಂಪಾ ಷಷ್ಠಿ ಮಹಾ ರಥೋತ್ಸವ ನಡೆಯಲಿದ್ದು ,ಜಾತ್ರೋತ್ಸವದ ಅಂತಿಮ ದಿನವಾದ ಡಿ 3 ರಂದು ಶ್ರೀ ದೇವರ ಅವಭೃತೋತ್ಸವ ,ನೌಕಾವಿಹಾರಗಳು ಜರುಗಲಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಈ ಜಾತ್ರಾ ಕಾರ್ಯಕ್ರಮಗಳನ್ನು ವೀಕ್ಷಿಸಲು ದೇಶ ಹಾಗೂ ವಿದೇಶಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿಗೆ ಭೇಟಿ ನೀಡುವುದು ವಿಶೇಷ.

ಜಾತ್ರೆಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳೂ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿವೆ. ಕುಮಾರಧಾರೆಯಿಂದ ದೇವಸ್ಥಾನದ ತನಕ ಬೀದಿ ಮಡೆಸ್ನಾನ (ಉರುಳು ಸೇವೆ) ಆರಂಭಗೊಂಡಿದ್ದು. ಬೆಳಗ್ಗೆ ಮತ್ತು ಸಂಜೆ ಭಕ್ತರು ಹರಕೆ ಪೂರೈಸುತ್ತಿದ್ದಾರೆ.
ಸೇವಾರ್ಥಿಗಳ ಸುರಕ್ಷೆಗಾಗಿ ಮತ್ತು ಭದ್ರತೆಗಾಗಿ ದೇವಸ್ಥಾನದ ಒಳ ಹೊರಗೆ ಈಗಾಗಲೇ 90 ಕ್ಯಾಮರಾಗಳಿದ್ದು, ಹೆಚ್ಚುವರಿ ಯಾಗಿ 67 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಕುಮಾರಧಾರ ನದಿ ಬಳಿ ಪೊಲೀಸ್‌ ಇಲಾಖೆ ಹೆಚ್ಚುವರಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲು ಸೂಚಿಸಲಾಗಿದೆ.ಇನ್ನು ಸೂಚನಾ ಫಲಕಗಳು,ದೀಪ ವ್ಯವಸ್ಥೆ, ಹೆಚ್ಚುವರಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಭೋಜನ ವ್ಯವಸ್ಥೆ, ನೂರಾರು ಸಂಖ್ಯೆಯಲ್ಲಿ ಸ್ವಯಂಸೇವಕರು ಇತ್ಯಾದಿ ಎಲ್ಲಾ ವ್ಯವಸ್ಥೆಗಳೂ ಈಗಾಗಲೇ ಪೂರ್ಣಗೊಂಡಿದೆ.Conclusion:ಇನ್ನು ಸುಳ್ಯ,ಪಂಜ, ಕಡಬ, ಧರ್ಮಸ್ಥಳ, ಗುಂಡ್ಯ ಮಾರ್ಗವಾಗಿ ಮತ್ತು ಧರ್ಮಸ್ಥಳ ಮಾರ್ಗವಾಗಿ ಬರುವ ಬಸ್‌ಗಳಿಗೆ ವಿವಿಧ ಕಡೆಗಳಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು ಅಲ್ಲಿಂದ ದೇವಸ್ಥಾನದ ವರೆಗೆ ಉಚಿತ ಮಿನಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಲಘು ವಾಹನಗಳಿಗೆ ಕುಮಾರಧಾರಾ ಹೆಲಿಪ್ಯಾಡ್‌ ಮೈದಾನ, ಜೂನಿಯರ್ ಕಾಲೇಜು ಮೈದಾನದಲ್ಲಿ, ದ್ವಿಚಕ್ರ ವಾಹನಗಳಿಗೆ ಸೀನಿಯರ್‌ ಕಾಲೇಜು, ಪೊಲೀಸ್‌ ಕವಾಯತು ಮೈದಾನದಲ್ಲಿ, ಸುಳ್ಯ ಕಡೆಯಿಂದ ಬರುವ ಬಸ್‌ಗಳಿಗೆ ಸವಾರಿ ಮಂಟಪದ ಬಳಿ ಮತ್ತು ಇತರ ಲಘು ವಾಹನಗಳಿಗೆ ಇಂಜಾಡಿ ಬಳಿ ನಿಲುಗಡೆಯ ವ್ಯವಸ್ಥೆ ಕಲ್ಪಿಸಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.