ETV Bharat / state

ಪ್ರತಿಭಾ ಕುಳಾಯಿ ನಿಂದಿಸಿ ಫೇಸ್ ಬುಕ್ ಪೋಸ್ಟ್ : ನ್ಯಾಯಾಲಯದ ಮುಂದೆ ಶರಣಾದ ಕೆ ಆರ್ ಶೆಟ್ಟಿ

ಪ್ರತಿಭಾ ಕುಳಾಯಿ ಅವರ ಫೋಟೋ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿದ ಕೆ.ಆರ್.ಶೆಟ್ಟಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಸೂಚಿಸಲಾಗಿದೆ.

kr-shetty-to-judicial-custody-for-facebook-post-insulting
ಪ್ರತಿಭಾ ಕುಳಾಯಿ ನಿಂದಿಸಿ ಫೇಸ್ ಬುಕ್ ಪೋಸ್ಟ್
author img

By

Published : Oct 28, 2022, 6:42 AM IST

ಮಂಗಳೂರು(ದಕ್ಷಿಣ ಕನ್ನಡ): ‌ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಅವರನ್ನು ನಿಂದಿಸಿ ಫೇಸ್ ಬುಕ್​ನಲ್ಲಿ ಪೋಸ್ಟ್ ಮಾಡಿದ ಕೆ ಆರ್ ಶೆಟ್ಟಿ ಎಂಬಾತ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ.

ಟೋಲ್ ಗೇಟ್ ವಿರುದ್ಧ ಇತ್ತೀಚಿಗೆ ನಡೆದ ಮುತ್ತಿಗೆ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಫೇಸ್ ಬುಕ್​ಗೆ ಹಾಕಿದ ಕೆ ಆರ್ ಶೆಟ್ಟಿ ಅಡ್ಯಾರ್ ಪದವು ಎಂಬಾತ ಇದಕ್ಕೊಂದು ಒಳ್ಳೆ ಟೈಟಲ್ ಕೊಡಿ ಪ್ರೆಂಡ್ಸ್ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್​ಗೆ ಕಹಳೆ ವೆಬ್ ಸೈಟ್ ಸಂಪಾದಕ ಶ್ಯಾಮ ಸುದರ್ಶನ ಭಟ್ ಎಂಬಾತ ಅಶ್ಲೀಲ ಅರ್ಥ ಬರುವಂತೆ ಬರೆದಿದ್ದರು.‌ ಈ ಬಗ್ಗೆ ಪ್ರತಿಭಾ ಕುಳಾಯಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆದರೆ ಪ್ರಕರಣ ದಾಖಲಾದ ಬಳಿಕ ಕೆ ಆರ್ ಶೆಟ್ಟಿ ಮತ್ತು ಶ್ಯಾಮ ಸುದರ್ಶನ ಭಟ್ ಪರಾರಿಯಾಗಿದ್ದರು. ಇಂದು ಪ್ರಕರಣದ ಎರಡನೇ ಆರೋಪಿ ಕೆ.ಆರ್.ಶೆಟ್ಟಿ ಎಂಬಾತ ತನ್ನ ವಕೀಲರೊಂದಿಗೆ ಕೋರ್ಟ್​ಗೆ ಶರಣಾಗಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ‌ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಸಾಮಾಜಿಕ ಜಾಲತಾಣದಲ್ಲಿ ನಿಂದನೆ: ವ್ಯಕ್ತಿ ವಿರುದ್ಧ ಮಾನನಷ್ಟ ಮೊಕದ್ದಮೆ- ಪ್ರತಿಭಾ ಕುಳಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.