ETV Bharat / state

ಕಸ್ತೂರಿ ರಂಗನ್​ ವರದಿ ಜಾರಿ ವಿರುದ್ಧ ಹೋರಾಟ: ಕಿಶೋರ್ ಶಿರಾಡಿ - ಕಿಶೋರ್ ಶಿರಾಡಿ

ಕಸ್ತೂರಿ ರಂಗನ್ ವರದಿಯು ಈ ಭಾಗದ ಕೃಷಿಕರನ್ನು ಆತಂಕಕ್ಕೀಡು ಮಾಡಿದೆ ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದ್ದಾರೆ.

dsd
ಕಿಶೋರ್ ಶಿರಾಡಿ ಅಸಮಾಧಾನ
author img

By

Published : Oct 18, 2020, 5:15 PM IST

ಸುಬ್ರಹ್ಮಣ್ಯ: ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಮತ್ತೆ ಕೈಗೆತ್ತಿಕೊಂಡ ಸರ್ಕಾರದ ನಡೆ ವಿರೋಧಿಸಿ ಮುಂದಿನ ಹೋರಾಟಗಳ ಬಗ್ಗೆ ತೀರ್ಮಾನಿಸಲು ಅ. 23 ರಂದು ಬಿಳಿನೆಲೆಯಲ್ಲಿ ಸಮಾಲೋಚನಾ ಸಭೆ ನಡೆಯಲಿದೆ ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದ್ದಾರೆ.

ಮಲೆನಾಡು ಜನ ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅಸಮಾಧಾನ

ಈ ಪರಿಸರ ವಿರೋಧಿ ನೀತಿಯ ವಿರುದ್ಧ ಹಿಂದಿನಿಂದಲೂ ಸುಬ್ರಹ್ಮಣ್ಯವನ್ನು ಕೇಂದ್ರೀಕರಿಸಿಕೊಂಡು ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಇದೀಗ ಸರ್ಕಾರ ಕೇಂದ್ರಕ್ಕೆ ವರದಿ ನೀಡುವಂತೆ ಗಡುವು ನೀಡಿದೆ. ಯಾವುದೇ ಹೆಚ್ಚಿನ ಕಾಲಾವಕಾಶ ಹಾಗೂ ಪೂರ್ವ ಮಾಹಿತಿ ನೀಡದೇ ಆದೇಶ ಹೊರಡಿಸಲಾಗಿದೆ ಎಂದು ಅವರು ದೂರಿದರು.

ಈ ಹಿಂದೆ ವರದಿ ಜಾರಿಯ ಕುರಿತು ಜಿಲ್ಲೆಯ ಬಾಧಿತ 48 ಗ್ರಾಮಸ್ಥರನ್ನು ಸೇರಿಸಿಕೊಂಡು ವಿಶೇಷ ಗ್ರಾಮಸಭೆ ನಡೆಸಲಾಗಿತ್ತು. ಇದರಲ್ಲಿ ಎಲ್ಲಾ ಕಡೆಯೂ ವರದಿ ಜಾರಿಗೆ ವಿರೋಧ ವ್ಯಕ್ತವಾಗಿತ್ತಲ್ಲದೇ, ಅನುಷ್ಠಾನವಾಗದಂತೆ ನಿರ್ಣಯ ಕೈಗೊಂಡರೂ ಇದೀಗ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.