ETV Bharat / state

ಕನ್ನಡ ಪ್ರಾಥಮಿಕ ಶಾಲೆಗಳೇ ನಮ್ಮ ಕಲೆ, ಸಾಹಿತ್ಯಕ್ಕೆ ಮೂಲ: ಡಾ.ಎಂ.ಪ್ರಭಾಕರ ಜೋಶಿ

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಎಂ.ಪ್ರಭಾಕರ ಜೋಶಿ ,ಶಾಲೆಗಳ ಅಭಿವೃದ್ಧಿ ಮೊದಲಿಗೆ ಆಗಬೇಕಿದೆ. ಇದಕ್ಕಾಗಿ ಶಾಲೆಗಳ ಅಭಿವೃದ್ಧಿ ಮಂಡಳಿಯನ್ನು ಬಳಸಿ, ಶಾಲೆಗಳಿಗೆ ಬಳಸುವ ಪರಿಕರ, ಕಟ್ಟಡ, ಭದ್ರತೆಗೆ ಮೊದಲ ಆದ್ಯತೆ ನೀಡುವ ಕೆಲಸ ಆಗಬೇಕು ಎಂದರು.

ಶಿಕ್ಷಕರ ದಿನಾಚರಣೆ
author img

By

Published : Sep 5, 2019, 5:19 PM IST

ಮಂಗಳೂರು: ಶಿಕ್ಷಕರ ಇಂದಿನ ಪರಿಸ್ಥಿತಿ ಸುಧಾರಿಸಲು ತಕ್ಷಣ ಸರ್ಕಾರ ಸರ್ವೇ ಮಾಡಲು ಒಂದು ತಂಡ ರಚಿಸಬೇಕು ಎಂದು ವಿಶ್ರಾಂತ ಪ್ರಾಂಶುಪಾಲ ಡಾ.ಎಂ.ಪ್ರಭಾಕರ ಜೋಶಿ ಸರ್ಕಾರಕ್ಕೆ ಮನವಿ ಮಾಡಿದರು.

ದ.ಕ.ಜಿಲ್ಲಾ ಮಟ್ಟದ ಹಾಗೂ ಮಂಗಳೂರು ವಲಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೊದಲಾಗಿ ಆಗಬೇಕಾದದ್ದು, ಶಾಲೆಗಳ ಅಭಿವೃದ್ಧಿ. ಆದ್ದರಿಂದ ಶಾಲೆಗಳ ಅಭಿವೃದ್ಧಿ ಮಂಡಳಿಯನ್ನು ಬಳಸಿ, ಶಾಲೆಗಳಿಗೆ ಬಳಸುವ ಪರಿಕರ, ಕಟ್ಟಡ, ಭದ್ರತೆಗೆ ಮೊದಲ ಆದ್ಯತೆ ನೀಡುವ ಕೆಲಸ ಆಗಬೇಕು ಎಂದರು.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಕನ್ನಡ ಪ್ರಾಥಮಿಕ ಶಾಲೆಗಳೇ ನಮ್ಮ ಕಲೆ ಸಾಹಿತ್ಯಗಳಿಗೆ ಮೂಲ. ಸರ್ಕಾರವೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭ ಮಾಡಿದೆ. ಇದರಿಂದ ನಮ್ಮ ರಾಜ್ಯದ ಭಾಷೆ ಕನ್ನಡ ಅಲ್ಲ ಎಂಬುದನ್ನು ಸರ್ಕಾರವೇ ಒಪ್ಪಿದಂತಾಗುತ್ತದೆ ಎಂದು ಇಂಗ್ಲಿಷ್​ ಶಿಕ್ಷಣವನ್ನು ವಿರೋಧಿಸಿದರು.

Intro:ಮಂಗಳೂರು: ಶಿಕ್ಷಕರ ಇಂದಿನ ಪರಿಸ್ಥಿತಿಯನ್ನು ಸುಧಾರಿಸಲು ತಕ್ಷಣ ಸರಕಾರ ಸರ್ವೇ ಮಾಡಲು ಒಂದು ತಂಡ ರಚಿಸಬೇಕು. ಅಲ್ಲದೆ ಇಡೀ ರಾಜ್ಯದ ಸರಿಕಾರಿ ಮತ್ತು ಅನುದಾನಿತ ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳ ಖಾಲಿ ಇರುವ 75% ಶಿಕ್ಷಕರ ಹುದ್ದೆಯನ್ನು ಭರ್ತಿಮಾಡಿ ಎಂದು ವಿಶ್ರಾಂತ ಪ್ರಾಂಶುಪಾಲ ಡಾ.ಎಂ.ಪ್ರಭಾಕರ ಜೋಷಿ ಸರಕಾರಕ್ಕೆ ಮನವಿ ಮಾಡಿದರು.

ದ.ಕ.ಜಿಲ್ಲಾ ಮಟ್ಟದ ಹಾಗೂ ಮಂಗಳೂರು ವಲಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮೊದಲಾಗಿ ಆಗಬೇಕಾದದ್ದು, ಶಾಲೆಗಳ ಅಭಿವೃದ್ಧಿ. ಆದ್ದರಿಂದ ಶಾಲೆಗಳ ಅಭಿವೃದ್ಧಿ ಮಂಡಳಿಯನ್ನು ಬಳಸಿ, ಶಾಲೆಗಳಿಗೆ ಬಳಸುವ ಪರಿಕರ, ಕಟ್ಟಡ, ಭದ್ರತೆಗೆ ಮೊದಲ ಆದ್ಯತೆ ನೀಡಿ ಎಂದು ರಾಜಕಾರಣಿಗಳಿಗೆ ಸಲಹೆ ನೀಡಿದರು‌.

Body:ಕನ್ನಡ ಪ್ರಾಥಮಿಕ ಶಾಲೆಗಳೇ ನಮ್ಮ ಕಲೆ ಸಾಹಿತ್ಯಗಳಿಗೆ ಮೂಲ. ಸರಕಾರವೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭ ಮಾಡಿದೆ. ಇಂಗ್ಲಿಷ್ ಮಾಧ್ಯಮ ಶಾಲೆ ಬೇಡ. ಹಾಗೆ ಮಾಡಿದರೆ ನಮ್ಮ ರಾಜ್ಯದ ಭಾಷೆ ಕನ್ನಡ ಅಲ್ಲ ಎಂದು ಸರಕಾರವೇ ಒಪ್ಪಿದಂತಾಗುತ್ತದೆ. ಇಂಗ್ಲಿಷ್ ಶಿಕ್ಷಣ ಇರುವ ಕ್ನಡ ಶಾಲೆ ಮಾಡಿ. ಮಕ್ಕಳಿಗೆ ಆರಂಭಿಕ ಶಿಕ್ಷಣ ಪರಿಸರದ ಭಾಷೆಯಲ್ಲಿಯೇ ದೊರಕಬೇಕು. ಸರಕಾರ 5ನೇ ತರಗತಿಯವರೆಗಾದರೂ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಿ ಎಂದು ಅವರು ಹೇಳಿದರು‌.

ಈ‌ಗ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ. ಶಿಕ್ಷಣದ ತಳಹದಿ ದೊಡ್ಡದಾಗಿದೆ. ಕ್ಲಾಸ್ ಎಜುಕೇಶನ್ ನಿಂದ ಮಾಸ್ ಎಜುಕೇಶನ್ ಗೆ ಬಂದಿದ್ದೇವೆ. ಹಿಂದೆಯೂ ಉತ್ತಮ ಅಧ್ಯಾಪಕರು ಇದ್ದರು ಈಗಲೂ ಇದ್ದಾರೆ. ಶಿಕ್ಷಣ ದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಅಧ್ಯಾಪಕ ಖಂಡಿತವಾಗಿಯೂ ಮಾಡಲೇಬೇಕು. ಒಟ್ಟು ಶಿಕ್ಷಣದ ಬಗ್ಗೆ ಚಿಂತನೆ ಮಾಡಲು ಅಧ್ಯಾಪಕರ ದಿನ ಆಚರಿಸಲಾಗುತ್ತದೆ ಎಂದು ಪ್ರಭಾಕರ ಜೋಷಿ ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಎಸ್.ಎಲ್.ಭೋಜೇಗೌಡ, ಮಾಜಿ ಸಚಿವ ಯು.ಟಿ.ಖಾದರ್, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ದ.ಕ.ಜಿಪಂ ಸಿಇಒ ಡಾ.ಸೆಲ್ವಮಣಿ‌ ಆರ್., ಡಯೆಟ್ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ, ದ.ಕ.ಜಿಲ್ಲಾ ಕಸಪಾ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.