ETV Bharat / state

'ಕಂಬಳ ವೀರ' ಶ್ರೀನಿವಾಸ್​​​​ ಗೌಡರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ : ದೂರು ದಾಖಲು - ಮೂಡುಬಿದ್ರಿ ಪೊಲೀಸ್ ಠಾಣೆ

ಇದು ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರಿಗೆ ಮಾಡಿರುವ ಅವಮಾನವಲ್ಲ. ಬದಲಿಗೆ ಇಡೀ ಕಂಬಳ ಕ್ರೀಡೆಗೆ ಮಾಡಿರುವ ಅವಮಾನ. ಆದ್ದರಿಂದ ತಕ್ಷಣ ಆರೋಪಿ ಪ್ರಶಾಂತ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ..

'ಕಂಬಳ ವೀರ' ಶ್ರೀನಿವಾಸ್​​​​ ಗೌಡ
'ಕಂಬಳ ವೀರ' ಶ್ರೀನಿವಾಸ್​​​​ ಗೌಡ
author img

By

Published : Jul 16, 2021, 9:33 PM IST

ಮಂಗಳೂರು : ಕಂಬಳ ಕ್ರೀಡೆಯ ಪ್ರಸಿದ್ಧ ಓಟಗಾರ ಶ್ರೀನಿವಾಸ ಗೌಡ ಅವರಿಗೆ ವ್ಯಕ್ತಿಯೋರ್ವ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಮೂಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಂಬಳ ಕ್ಷೇತ್ರದ ಅತೀ ವೇಗದ ಓಟಗಾರ ಎಂದು ಖ್ಯಾತಿ ಗಳಿಸಿರುವ‌ ಶ್ರೀನಿವಾಸ ಗೌಡ ಅವರಿಗೆ ನಿನ್ನೆ ದೂರವಾಣಿ ಕರೆ ಮಾಡಿರುವ ಪ್ರಶಾಂತ್ ಎಂಬಾತ ಅವಾಚ್ಯ ಶಬ್ಧ ಬಳಸಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಕರೆ ಮಾಡಿದ್ದ ಪ್ರಶಾಂತ್ ಎಂಬಾತ ಕಂಬಳದ ಕುರಿತು ಮಾತನಾಡಿದ್ದು, ಈ ವೇಳೆ ಶ್ರೀನಿವಾಸ್ ಗೌಡನ ವಿರುದ್ಧ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸಿದ್ದಾನೆ. ಈ ಹಿನ್ನೆಲೆ ಶ್ರೀನಿವಾಸ ಗೌಡ ಮೂಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಿಂದನೆ ಆರೋಪದಡಿ ದೂರು ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೂಡುಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್, ಇದು ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರಿಗೆ ಮಾಡಿರುವ ಅವಮಾನವಲ್ಲ. ಬದಲಿಗೆ ಇಡೀ ಕಂಬಳ ಕ್ರೀಡೆಗೆ ಮಾಡಿರುವ ಅವಮಾನ. ಆದ್ದರಿಂದ ತಕ್ಷಣ ಆರೋಪಿ ಪ್ರಶಾಂತ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಓದಿ: ಮಂಗಳೂರಿನ ಇಂದಿರಾ ಕಾಲೇಜ್ ಆಫ್ ನರ್ಸಿಂಗ್​ನಲ್ಲಿ ರ‍್ಯಾಗಿಂಗ್​: 6 ವಿದ್ಯಾರ್ಥಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.