ETV Bharat / state

ಕಡಬ: ಸರ್ಕಾರಿ ಜಾಗದ ಅಕ್ರಮ ಒತ್ತುವರಿ ನಿಷೇಧ ಮಾಡುವಂತೆ ಆಗ್ರಹ

ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡಾಳ ಎಂಬಲ್ಲಿ ಯಥಾಸ್ಥಿತಿ ಕಾಪಾಡುವಂತೆ ಅಧಿಕಾರಿಗಳ ಆದೇಶ ಇದ್ದರೂ ಸರ್ಕಾರಿ ಜಾಗವನ್ನು ವ್ಯಕ್ತಿಯೊಬ್ಬರು ಆಕ್ರಮಿಸಿ ಕೃಷಿ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಈ ಜಾಗವನ್ನು ನಿವೇಶನ ರಹಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ನೀಡುವಂತೆ ಜಯಕುಮಾರಿ ಎಂಬುವರು ಆಗ್ರಹಿಸಿದ್ದಾರೆ.

ಸರ್ಕಾರಿ ಜಾಗದ ಅಕ್ರಮ ಒತ್ತುವರಿ ನಿಷೇಧ ಮಾಡುವಂತೆ ಆಗ್ರಹ
Demanding a ban on illegal encroachment of govt land
author img

By

Published : Jan 30, 2021, 10:45 AM IST

ಕಡಬ: ತಾಲೂಕಿನ ಪೆರಾಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡಾಳ ಎಂಬಲ್ಲಿ ಯಥಾಸ್ಥಿತಿ ಕಾಪಾಡುವಂತೆ ಅಧಿಕಾರಿಗಳ ಆದೇಶ ಇದ್ದರೂ ಸರ್ಕಾರಿ ಜಾಗವನ್ನು ವ್ಯಕ್ತಿಯೊಬ್ಬರು ಆಕ್ರಮಿಸಿ ಕೃಷಿ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಈ ಜಾಗವನ್ನು ನಿವೇಶನ ರಹಿತ ಪ.ಜಾತಿ,ಪ.ಪಂಗಡದ ಜನರಿಗೆ ನೀಡುವಂತೆ ಸ್ಥಳೀಯ ಜಯಕುಮಾರಿ ಎಂಬುವರು ಆಗ್ರಹಿಸಿದ್ದಾರೆ.

ಸರ್ಕಾರಿ ಜಾಗದ ಅಕ್ರಮ ಒತ್ತುವರಿ ನಿಷೇಧ ಮಾಡುವಂತೆ ಆಗ್ರಹ

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಮಸ್ಯೆ ಎದುರಾಗಿರುವ ಸ್ಥಳವನ್ನು ತನಿಖೆ ಮಾಡಿ ವರದಿ ನೀಡಿದ ಕಂದಾಯ ಅಧಿಕಾರಿಗಳು ಇಲ್ಲಿ ಯಥಾಸ್ಥಿತಿ ಕಾಪಾಡುವಂತೆ ಇತ್ತಂಡಗಳಿಗೆ ಆದೇಶ ಮಾಡಿದ್ದಾರೆ. ಆದರೂ ಸರ್ಕಾರಿ ಜಾಗ ಒತ್ತುವರಿ ಮಾಡಿ ವ್ಯಕ್ತಿಯೋರ್ವರು ಆ ಜಾಗದಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಈ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ವಿನಂತಿ ಮಾಡಿದ್ದಾರೆ.

ಬಳಿಕ ದಲಿತ ಸೇವಾ ಸಂಸ್ಥೆ ಪದಾಧಿಕಾರಿ ಅಣ್ಣಿ ಎಳ್ತಿಮಾರ್ ಮಾತನಾಡಿ, ಪೆರಾಬೆ ಗ್ರಾಮದ ಸರ್ವೆ ನಂ 253/ಪಿ1ರಲ್ಲಿ 13.36 ಎಕರೆ ಗೋಮಾಳ ಜಾಗ ಎಂದು ಕಾದಿರಿಸಲಾಗಿತ್ತು. ಆದರೆ ಇದೆ ಗೋಮಾಳ ಜಾಗವನ್ನು ಸರ್ಕಾರಿ ಜಾಗ ಎಂದು ಪರಿವರ್ತಿಸಲಾಗಿತ್ತು. ಸ್ಥಳೀಯ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸ್ಪಷ್ಟ ಮಾಹಿತಿ ಪಡೆಯಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ಜಾಗವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿಲ್ಲವಾದಲ್ಲಿ ಕಡಬ ತಹಶಿಲ್ದಾರ್​ ಕಚೇರಿ ಮುಂಭಾಗದಲ್ಲಿ ಮತ್ತು ಪುತ್ತೂರು ಉಪ ಆಯುಕ್ತರ ಕಚೇರಿಯ ಮುಂಭಾಗದಲ್ಲಿ ದಲಿತ ಸೇವಾ ಸಮಿತಿಯು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.