ETV Bharat / state

ಮಾರುಕಟ್ಟೆಗೆ ಲಗ್ಗೆ ಇಟ್ಟಿತು ಜಾಕ್‌ಫ್ರೂಟ್​​ ಎಕ್ಲೆರ್ ಚಾಕೋಲೆಟ್ ... ಕೆಲವೇ ದಿನಗಳಲ್ಲಿ ದೇಶಾದ್ಯಂತ ಲಭ್ಯ - campco_chocolet_story_puttur

ಹಲಸಿನ ಹಣ್ಣಿನಲ್ಲಿ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಆದರೆ, ದೇಶದಲ್ಲಿ ಎಲ್ಲಿಯೂ ಹಲಸಿನ ಹಣ್ಣಿನಿಂದ ಚಾಕೋಲೆಟ್ ತಯಾರಿಸಲಾಗಿಲ್ಲ. ದೇಶದಲ್ಲೇ ಮೊದಲ ಬಾರಿ ಹಲಸಿನ ಹಣ್ಣಿನ ಚಾಕೋಲೆಟ್ ಅನ್ನು ಕ್ಯಾಂಪ್ಕೋ ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿದ್ದು, ಕೆಲವೇ ದಿನಗಳಲ್ಲಿ ದೇಶಾದ್ಯಂತ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ.

Jackfruit Chocolate available in market
ಜಾಕ್‌ಫ್ರೂಟ್​​ ಎಕ್ಲೆರ್ ಚಾಕೋಲೆಟ್
author img

By

Published : Jul 23, 2021, 1:27 PM IST

Updated : Jul 23, 2021, 10:18 PM IST

ಪುತ್ತೂರು: ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪೋ ಇದೀಗ ಹಲಸಿನ ಹಣ್ಣು ಬಳಸಿ ಚಾಕೋಲೆಟ್​​ ಉತ್ಪಾದಿಸಿದೆ. ಜಾಕ್ ಫ್ರೂಟ್ ಎಕ್ಲೆರ್ ಹೆಸರಿನಲ್ಲಿ ಈ ಚಾಕಲೇಟ್ ಮಾರುಕಟ್ಟೆಗೆ ಪ್ರವೇಶಿದೆ. ಹಣ್ಣಿನಿಂದ ತಯಾರಿಸಿದ ಚಾಕೋಲೆಟ್ ಉತ್ಪನ್ನ ಭಾರತದಲ್ಲಿ ಇದೇ ಮೊದಲು. ಈ ಸಾಧನೆ ತೋರಿದ ಭಾರತದ ಮೊದಲ ಸಂಸ್ಥೆಯೆಂದು ಕ್ಯಾಂಪ್ಕೋ ಗುರುತಿಸಿಕೊಂಡಿದೆ.

ನೈಸರ್ಗಿಕವಾಗಿ ದೊರೆಯುವ ಹಲಸಿನ ಹಣ್ಣಿಗೆ ಈಗ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಅದರಲ್ಲೂ ಯುರೋಪಿಯನ್ ದೇಶಗಳಲ್ಲಿ ಇದನ್ನು ಸೂಪರ್ ಫುಡ್ ಎನ್ನುವ ರೀತಿಯಲ್ಲಿ ಪರಿಚಯಿಸಲಾಗುತ್ತಿದೆ. ಕ್ಯಾಲ್ಸಿಯಂ ಸೇರಿದಂತೆ ಹಲವು ರೀತಿಯ ಮಿನರಲ್ಸ್ ಗಳನ್ನೂ ಈ ಹಣ್ಣು ಒಳಗೊಂಡಿದೆ.

ಹಲಸಿನ ಹಣ್ಣಿನಿಂದ ಚಾಕೋಲೆಟ್:

ಚಿಪ್ಸ್, ಸಿಹಿ ತಿನಿಸು ಸೇರಿದಂತೆ ಬಗೆಬಗೆಯ ಖಾದ್ಯಗಳಿಗೆ ಹೆಸರಾದ ಹಲಸಿನ ಹಣ್ಣಿನಿಂದ ಈಗ ಚಾಕೋಲೆಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅಡಕೆ ಬೆಳೆಗಾರರ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋ ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಈಗಾಗಲೇ ತಮ್ಮ ಜ್ಯಾಕ್ ಫ್ರೂಟ್ ಎಕ್ಲೆರ್​ ಚಾಕೋಲೆಟ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕರ್ನಾಟಕ ಹಾಗೂ ಕೇರಳದ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು, ಕೆಲವೇ ದಿನಗಳಲ್ಲಿ ಇದು ದೇಶಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ರಾಸಾಯನಿಕಗಳ ಬಳಕೆಯಿಲ್ಲ:

ಈ ಹಿಂದೆ ಕೋಕ್ಕೋ ಬೆಳೆಗಾರ ಹಾಗೂ ಅಡಕೆ ಬೆಳೆಗಾರರ ಹಿತ ಕಾಯುತ್ತಿದ್ದ ಕ್ಯಾಂಪ್ಕೋ ಮುಂದಿನ ದಿನಗಳಲ್ಲಿ ಹಲಸಿನ ಹಣ್ಣಿನ ಬೆಳಗಾರರ ಹಿತ ಕಾಯಲು ಮುಂದಾಗಿದೆ. ಹಲಸಿನ ಹಣ್ಣನ್ನು ಸಂಸ್ಕರಿಸಿ ಅದರಿಂದ ನೀರಿನ ಅಂಶ ಹಾಗೂ ಎಣ್ಣೆಯ ಅಂಶಗಳನ್ನು ತೆಗೆದ ಬಳಿಕ ಹಣ್ಣನ್ನು ಪುಡಿ ಮಾಡಿ ಚಾಕೋಲೆಟ್​ ಮಾಡಲಾತ್ತದೆ. ಚಾಕೋಲೆಟ್ ಅನ್ನು ಹೆಚ್ಚಾಗಿ ಮಕ್ಕಳೇ ಉಪಯೋಗಿಸುವ ಕಾರಣ, ಮಕ್ಕಳ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಈ ಚಾಕೋಲೆಟ್ ತಯಾರಿಸಲಾಗಿದೆ.

ಯಾವುದೇ ರಾಸಾಯನಿಕಗಳನ್ನು ಬಳಕೆ ಮಾಡದೇ ನೈಸರ್ಗಿಕ ಹಣ್ಣನ್ನೇ ಬಳಸಿಕೊಂಡು ಈ ಚಾಕೋಲೆಟ್ ತಯಾರಿಸಲಾಗಿದ್ದು, ಕ್ಯಾಂಪ್ಕೋದ ಈ ಪ್ರಯತ್ನ ಮುಂದಿನ ದಿನಗಳಲ್ಲಿ ಹಲಸಿನ ಹಣ್ಣು ಬೆಳೆಗಾರರಿಗೂ ಹೊಸ ಅವಕಾಶಗಳನ್ನು ತೆರೆದಿರಿಸಿದೆ.

ಜಾಕ್‌ಫ್ರೂಟ್​​ ಎಕ್ಲೆರ್ ಚಾಕೋಲೆಟ್

ಪ್ರಯೋಗಗಳ ಬಳಿಕ ಮಾರುಕಟ್ಟೆಯಲ್ಲಿ ಬಿಡುಗಡೆ:

ಕಳೆದ ಆರು ತಿಂಗಳಿನಿಂದ ಹಲಸಿನ ಹಣ್ಣಿನ ಚಾಕೋಲೆಟ್ ತಯಾರಿಸುವ ನಿಟ್ಟಿನಲ್ಲಿ ಕ್ಯಾಂಪ್ಕೋದಲ್ಲಿ ಹಲವು ಪ್ರಯೋಗಳನ್ನು ನಡೆಸಲಾಗಿದೆ. ಫಸ್ಟ್ ಟ್ರಯಲ್ ಅನ್ನು ಕಳೆದ ಜನವರಿಯಲ್ಲಿ ಮಾಡಲಾಗಿದ್ದು, ಎರಡನೇ ಟ್ರಯಲ್ ಅನ್ನು ಫೆಬ್ರವರಿಯಲ್ಲಿ ಮಾಡಲಾಗಿದೆ. ಸುಮಾರು ಆರು ತಿಂಗಳ ಬಳಿಕ ಇದೀಗ ಈ ಚಾಕೋಲೆಟ್ ಅನ್ನು ಎಲ್ಲ ಪ್ರಯೋಗಗಳ ಬಳಿಕ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿ ಹಲಸಿನ ಹಣ್ಣಿನ ಚಾಕೋಲೆಟ್ ಪರಿಚಯಿಸಿದ ಕ್ಯಾಂಪ್ಕೋ

ಒಂದು ಟನ್ ಚಾಕೋಲೆಟ್ ಉತ್ಪಾದನೆಗೆ 100 ಕೆ.ಜಿ ಡ್ರೈ ಮಾಡಲಾದ ಹಲಸಿನ ಹಣ್ಣಿನ ಚಿಪ್ಸ್ ಬೇಕಾಗುತ್ತದೆ. ಇದಕ್ಕೆ ಕೇರಳ ಹಾಗೂ ಕರ್ನಾಟಕದ ಸ್ವಾದಿಷ್ಟ ಹಲಸಿನ ಹಣ್ಣುಗಳನ್ನು ಬಳಕೆ ಮಾಡಲಾಗಿದೆ. ಮಾರುಕಟ್ಟೆಗೆ ಜಾರ್‌ನಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಒಂದು ಜಾರ್‌ನಲ್ಲಿ 80 ಚಾಕೋಲೆಟ್ ಪೀಸ್ ಇದ್ದು, 1 ಪೀಸ್ (5 ಗ್ರಾಂ) ಗೆ 2 ರೂಪಾಯಿ ದರ ಹಾಗೂ 1 ಜಾರ್‌ಗೆ 160 ರೂಪಾಯಿ ದರ ನಿಗದಿಪಡಿಸಲಾಗಿದೆ. ಈ ಚಾಕೋಲೆಟ್ ನಲ್ಲಿ ಶೇ.12ರಷ್ಟು ಹಲಸಿನ ಹಣ್ಣಿನ ಅಂಶ, ಸಕ್ಕರೆ, ಹಾಗೂ ಫ್ಯಾಟ್‌ನ್ನು ಬಳಸಿ ಸಿದ್ಧಪಡಿಸಲಾಗಿದೆ. ಗರಿಷ್ಠ 9 ತಿಂಗಳವರೆಗೆ ಈ ಚಾಕೋಲೆಟ್ ಉಪಯೋಗಿಸಬಹುದಾಗಿದೆ.

ಹಲಸಿನ ಹಣ್ಣಿನ ಮೌಲ್ಯವರ್ಧನೆ:

ಅಡಕೆ ಹಾಗೂ ಕೊಕ್ಕೋ ಬೆಳೆಗಾರರಿಗೆ ಮಾತ್ರ ಸ್ಪಂದಿಸುತ್ತಿದ್ದ ಅಂತಾರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋ ಇದೀಗ ಹಲಸಿನ ಹಣ್ಣಿನ ಮೌಲ್ಯವರ್ಧನೆಗೂ ಮುಂದಾಗಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಹಣ್ಣು ಬೆಳೆಯುವ ಕೃಷಿಕನಿಗೆ ವರದಾನವಾಗುವ ಸಾಧ್ಯತೆಯೂ ಇದೆ.

Last Updated : Jul 23, 2021, 10:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.