ಮಂಗಳೂರು: 'ಗೋ ಬ್ಯಾಕ್ ಮೋದಿ' ಪ್ರತಿಭಟನೆಗೆ ಅನುಮತಿ ದೊರೆಯದ ಹಿನ್ನೆಲೆ ಸಿಎಂರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ತಮ್ಮ ಮನವಿ ವಾಪಸ್ ಪಡೆದುಕೊಂಡಿದೆ.
ಐವನ್ ಡಿಸೋಜರ ನಿಯೋಗ ಜಿಲ್ಲಾಧಿಕಾರಿ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಭೇಟಿ ಮಾಡಿ, ಪ್ರತಿಭಟನೆ ಹಿಂದೆಗೆದುಕೊಂಡಿದೆ.
ವಿಜಯ ಬ್ಯಾಂಕ್ ವಿಲೀನ ಹಾಗೂ ಎನ್ಎಂಪಿಟಿ ಪೋರ್ಟ್ ಖಾಸಗೀಕರಣ ಬಗ್ಗೆ ಕೇಂದ್ರ ಸರಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಮೋದಿಗೆ ಆಗ್ರಹಿಸಲಾಗಿತ್ತು. ಶನಿವಾರ ಮಂಗಳೂರಿಗೆ ಬರುವ ಪ್ರಧಾನಿ ಮೋದಿ ಜತೆ ಈ ವಿಚಾರ ಮಾತನಾಡಲು ಅವಕಾಶ ನೀಡಬೇಕು ಎಂದೂ ಡಿಸೋಜ ಮನವಿ ಮಾಡಿದ್ದರು. ಒಂದು ವೇಳೆ ಪ್ರಧಾನಿ ಭೇಟಿಗೆ ಅವಕಾಶ ನೀಡದಿದ್ದರೆ ಗೋ ಬ್ಯಾಕ್ ಮೋದಿ ಘೋಷಣೆ ಕೂಗಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು.
ಆದರೆ ಜಿಲ್ಲಾಡಳಿತದಿಂದ ಪ್ರತಿಭಟನೆಗೆ ಅವಕಾಶ ದೊರೆಯದ ಹಿನ್ನೆಲೆ ಡಿಸೋಜ ನಿಯೋಗ ಮನವಿಯನ್ನು ಹಿಂದೆಗೆದುಕೊಂಡಿದೆ.