ETV Bharat / state

ರಾಜ್ಯ ಸರ್ಕಾರ ಆರು ತಿಂಗಳ ಕಾಲ ಉಳಿಯುವುದಿಲ್ಲ: ಐವನ್ ಡಿಸೋಜ ಭವಿಷ್ಯ - B. S. Yediyurappa

ಇಂದಿನ ಈ ಸರ್ಕಾರ 2008 ರಿಂದ 2013ರ ಸರ್ಕಾರದ ಹಾದಿಯಲ್ಲಿದೆ ಎಂದು ಪ್ರಾರಂಭದಲ್ಲೇ ತೋರಿಸಿಕೊಟ್ಟಿದೆ. ಶಾಸಕರಾದ ರೇಣುಕಾಚಾರ್ಯ, ಅಂಗಾರ ಮತ್ತು ಸಚಿವರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್ ಅತೃಪ್ತರಾಗಿದ್ದಾರೆ. ಸಿ‌.ಟಿ.ರವಿ ಈಗಾಗಲೇ ಕಾರನ್ನು ಹಿಂದಕ್ಕೆ ಕಳಿಸಿದ್ದಾರೆ. ಹಿರಿಯ ಬಿಜೆಪಿ ನಾಯಕರಿಗೆ ಸ್ವಾಭಿಮಾನ ಇದ್ದರೆ ಸಿ‌.ಟಿ. ರವಿಯವರ ಹಾದಿಯನ್ನು ತುಳಿಯಿರಿ ಎಂದು ಐವನ್ ಡಿಸೋಜ ಹೇಳಿದ್ದಾರೆ.

ಐವನ್ ಡಿಸೋಜ
author img

By

Published : Aug 27, 2019, 3:22 PM IST

ಮಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗಾಗಲೇ ಭಿನ್ನಮತ ಸ್ಫೋಟಗೊಂಡಿದ್ದು, ಅದು ಸಿ.ಟಿ. ರವಿಯಿಂದ ಪ್ರಾರಂಭವಾಗಿದೆ. ಇದು ಹೊಸ ದಿಕ್ಕೊಂದನ್ನು ಪಡೆಯಲಿದೆ. ಇಂದಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ, ಸರ್ಕಾರ ಆರು ತಿಂಗಳು ಸಹ ಬಾಳುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಐವನ್ ಡಿಸೋಜ

ನಗರದ ಮಲ್ಲಿಕಟ್ಟೆಯಲ್ಲಿರುವ ದ‌.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಸಚಿವರ ಹೆಸರು ಘೋಷಣೆ ಆಗಿವೆ. ಚರಿತ್ರೆಯಲ್ಲಿಯೇ ಮೊದಲ ಮೂರು ಮಂದಿ ಉಪಮುಖ್ಯಮಂತ್ರಿಗಳು ಆಯ್ಕೆಯಾಗಿದ್ದಾರೆ. ಸಚಿವರ ಆಯ್ಕೆಗೆ ದೆಹಲಿಯಿಂದ ಆದೇಶ ಬಂದ್ರೆ, ಖಾತೆಗೆ ಯಾರಾಗಬೇಕೆಂದು ನಾಗಪುರದಿಂದ ಆದೇಶ ಬಂತು. ದೆಹಲಿ ಮತ್ತು ನಾಗಪುರ ಹೋರಾಟದಿಂದ ಹೈಕಮಾಂಡ್​ಗೆ ಯಡಿಯೂರಪ್ಪನವರ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದರು.

ಇಂದಿನ ಈ ಸರ್ಕಾರ 2008 ರಿಂದ 2013ರ ಅವಧಿಯಲ್ಲಿದ್ದ ಸರ್ಕಾರದಂತಿದೆ ಎಂದು ಪ್ರಾರಂಭದಲ್ಲೇ ತೋರಿಸಿಕೊಟ್ಟಿದೆ. ಶಾಸಕರಾದ ರೇಣುಕಾಚಾರ್ಯ, ಅಂಗಾರ ಮತ್ತು ಸಚಿವರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್ ಅತೃಪ್ತರಾಗಿದ್ದಾರೆ. ಸಿ‌.ಟಿ.ರವಿ ಈಗಾಗಲೇ ಕಾರನ್ನು ಹಿಂದಕ್ಕೆ ಕಳಿಸಿದ್ದಾರೆ. ಹಿರಿಯ ಬಿಜೆಪಿ ನಾಯಕರಿಗೆ ಸ್ವಾಭಿಮಾನ ಇದ್ದರೆ ಸಿ‌.ಟಿ. ರವಿಯವರನ್ನು ಬೆಂಬಲಿಸಿ ಎಂದು ಐವನ್ ಡಿಸೋಜ ಸವಾಲು ಹಾಕಿದರು.

ಯಡಿಯೂರಪ್ಪ ಆ್ಯಂಡ್ ಸನ್ಸ್ ಎಲ್ಲಾ ರೀತಿಯ ವರ್ಗಾವಣೆಯಲ್ಲಿ ಭಾಗವಹಿಸಿದ್ದಾರೆ. ಇದು ಜನಪರ ಸರ್ಕಾರ ಅಲ್ಲ. ಜನ ವಿರೋಧಿ ಸರ್ಕಾರ ಆಗುತ್ತದೆ ಎಂದು ಒಂದು ತಿಂಗಳ ಅವಧಿಯಲ್ಲೇ ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಈ ಸರ್ಕಾರ ಜನಪರ ಆಗಿದ್ದರೆ ರಾಜ್ಯದಲ್ಲಿ ಭೀಕರ ನೆರೆ ಬಂದು ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಅದಕ್ಕೆ ಏನಾದರೂ ಕೆಲಸ ಮಾಡಬೇಕಿತ್ತು. 26 ಸಂಸದರು, 5 ಜನ ಸಚಿವರಿದ್ದು, ಇಂದಿನವರೆಗೆ 5 ಪೈಸೆ ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Intro:ಮಂಗಳೂರು: ರಾಜ್ಯ ಬಿಜೆಪಿ ಪಕ್ಷದಲ್ಲಿ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಅದು ಸಿ.ಟಿ.ರವಿಯಿಂದ ಪ್ರಾರಂಭವಾಗಿದೆ. ಇದು ಹೊಸ ದಿಕ್ಕೊಂದನ್ನು ಪಡೆಯಲಿದ್ದು, ಇಂದಿನ ರಾಜಕೀಯ ವಿದ್ಯಮಾನಗಳನ್ನು ಕಾಣುವಾಗ ಸರಕಾರ ಆರು ತಿಂಗಳು ಕಾಲ ಬಾಳುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ದ‌.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಕಾರ ರಚನೆಯಾಯಿತು. ಮಂತ್ರಿಗಳ ಘೋಷಣೆ ಆಗಿದೆ. ಚರಿತ್ರೆಯಲ್ಲಿಯೇ ಮೂರು ಮಂದಿ ಉಪಮುಖ್ಯಮಂತ್ರಿಗಳು ಆಯ್ಕೆಯಾಗಿದ್ದಾರೆ. ಮಂತ್ರಿಗಳ ಆಯ್ಕೆ ದೆಹಲಿಯಿಂದ ಆದೇಶ ಬಂತು. ಖಾತೆಗೆ ಯಾರಾಗಬೇಕೆಂದು ನಾಗಪುರದಿಂದ ಆದೇಶ ಬಂತು. ದೆಹಲಿ ಮತ್ತು ನಾಗಪುರ ಹೋರಾಟದಿಂದ ಹೈಕಮಾಂಡ್ ಗೆ ಯಡಿಯೂರಪ್ಪ ನವರ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ಹೇಳಿದರು.

Body:ಇಂದಿನ ಈ ಸರಕಾರ 2008 ರಿಂದ 2013 ರ ಸರಕಾರವಾಗಿದೆ ಎಂದು ಪ್ರಾರಂಭದ ಹಾದಿಯಲ್ಲಿಯೇ ತೋರಿಸಿಕೊಟ್ಟಿದೆ. ರೇಣುಕಾಚಾರ್ಯ, ಅಂಗಾರರವರು, ಜಗದೀಶ್ ಶೆಟ್ಟರ್, ಆರ್.ಅಶೋಕ್ ಅತೃಪ್ತರಾಗಿದ್ದಾರೆ. ಸಿ‌.ಟಿ.ರವಿ ಈಗಾಗಲೇ ಕಾರನ್ನು ಹಿಂದಕ್ಕೆ ಕಳಿಸಿದ್ದಾರೆ. ಹಿರಿಯ ಬಿಜೆಪಿ ನಾಯಕರಿಗೆ ಸ್ವಾಭಿಮಾನ ಇದ್ದರೆ ಸಿ‌.ಟಿ.ರವಿಯವರ ಹಾದಿಯನ್ನು ತುಳಿಯಿರಿ ಎಂದು ಐವನ್ ಡಿಸೋಜ ಸಲಹೆ ನೀಡಿದರು.

ಇಂದು ಜನರ ದುಡ್ಡನ್ನು ಲೂಟಿ ಮಾಡುವ ಗುಂಪು ಸರಕಾರ ರಚನೆಯಾಗಿದೆ. ಇದು ಅಲ್ಪಮತದ ಸರಕಾರ. ಬಹಳಷ್ಟು ಸಮಯ ಬಾಳಿಕೆ ಇಲ್ಲದ ಸರಕಾರ. ವರ್ಗಾವಣೆ ದಂಧೆ ಸಾರಾಸಗಟಾಗಿ ನಡೆಯುತ್ತಿದೆ. ಯಡಿಯೂರಪ್ಪ ಆ್ಯಂಡ್ ಸನ್ಸ್ ಎಲ್ಲಾ ರೀತಿಯ ವರ್ಗಾವಣೆ ಯಲ್ಲಿ ಭಾಗವಹಿಸಿದ್ದಾರೆ. ಇದು ಜನಪರ ಸರಕಾರ ಅಲ್ಲ. ಜನ ವಿರೋಧಿ ಸರಕಾರ ಆಗುತ್ತದೆ ಎಂದು ಒಂದು ತಿಂಗಳ ಅವಧಿಯಲ್ಲೇ ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಈ ಸರಕಾರ ಜನಪರ ಆಗಿದ್ದರೆ ರಾಜ್ಯದಲ್ಲಿ ಭೀಕರ ನೆರೆ ಬಂದು ಜನರು ಸಂಕಷ್ಟಕ್ಕೊಳಗಾಗಿದ್ದಾರೆ ಅದಕ್ಕೆ ಏನಾದರೂ ಕೆಲಸ ಮಾಡಬೇಕಿತ್ತು. 26 ಸಂಸದರು, 5 ಜನ ಮಂತ್ರಿಗಳಿದ್ದು, ಇಂದಿನವರೆಗೆ 5 ಪೈಸೆ ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ. 50 ಸಾವಿರ ಕೋಟಿ ರೂ. ನಷ್ಟ ಆಗಿದೆ ಎಂದು ಯಡಿಯೂರಪ್ಪ ಹೇಳಿದರೆ, ತಜ್ಞರು ಒಂದು ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಹೇಳುತ್ತಿದ್ದಾರೆ. 103 ತಾಲೂಕುಗಳಲ್ಲಿ ರಸ್ತೆಗಳು ಸಂಪೂರ್ಣ ಕಿತ್ತುಹೋಗಿವೆ. 65 ಲಕ್ಷ ಮನೆಗಳಿಗೆ ಭಾಗಶಃ ಹಾನಿಯಾಗಿವೆ. 35 ಸಾವಿರ ಮನೆಗಳು ಸಂಪೂರ್ಣ ನಾಶ ಆಗಿದೆ. 20 ಲಕ್ಷ ಭೂಮಿಯಲ್ಲಿ ಬೆಳೆ ಹಾಳಾಗಿವೆ. 25 ಸಾವಿರ ಎಕರೆ ಭೂಮಿ ಕುಸಿತಕ್ಕೊಳಗಾಗಿ ಹಾನಿಯಾಗಿವೆ. ರಾಜ್ಯ ಸರಕಾರಕ್ಕೆ ಧ್ವನಿ ಇದ್ದಿದ್ದರೆ ಪ್ರವಾಹ ಪರಿಶೀಲನೆಗೆ ಕೇಂದ್ರದಿಂದ ಬಂದಿರುವ ತಂಡದ ಮೂಲಕ ಪರಿಹಾರ ತರುವ ಪ್ರಯತ್ನ ಮಾಡುತ್ತಿತ್ತು. ಮುಖ್ಯಮಂತ್ರಿ ಒಂದು ಸಾವಿರ ಕೋಟಿ ರೂ., ಎರಡು ಸಾವಿರ ಕೋಟಿ ರೂ. ಕೊಡಿ ಎಂದು ಬೊಬ್ಬೆ ಹೊಡೆಯಿತು. ಆದರೆ ಹೈಕಮಾಂಡ್ ಯಡಿಯೂರಪ್ಪರ ಮಾತನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಸರ್ವ ಪಕ್ಷದ ತಂಡವನ್ನಾದರೂ ದೆಹಲಿಗೆ ತೆಗೆದುಕೊಂಡು ನಮ್ಮ ಮೂಲಕ ಒತ್ತಡ ಹಾಕಬಹುದಿತ್ತು. ಅದು ಕೊಂಡುಹೋಗುವ ಧೈರ್ಯವೂ ನಿಮ್ಮಲ್ಲಿಲ್ಲ ಎಂದು ಐವನ್ ಡಿಸೋಜ ಟೀಕೆ ಮಾಡಿದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.