ETV Bharat / state

ಸಾವರ್ಕರ್‌​ಗೆ ಭಾರತ ರತ್ನ ಪ್ರಸ್ತಾಪ ಮಹಾ ಚುನಾವಣೆ ತಂತ್ರವಷ್ಟೇ.. ಕೈ ಮುಖಂಡ ಐವಾನ್​ ಡಿಸೋಜ - Congress

ವಿ ಡಿ ಸಾವರ್ಕರ್‌​ಗೆ ಭಾರತರತ್ನ ಪ್ರಶಸ್ತಿ ಕೊಡುವ ಪ್ರಸ್ತಾಪ ಮಹಾರಾಷ್ಟ್ರದಲ್ಲಿ ಚುನಾವಣೆ ಗೆಲ್ಲಲು ಮಾಡಿದ ತಂತ್ರಗಾರಿಕೆ ಎಂದು ವಿಧಾನ ಪರಿಷತ್​ ಸದಸ್ಯ ಐವಾನ್​ ಡಿಸೋಜ ಆರೋಪಿಸಿದ್ದಾರೆ.

ವಿಧಾನ ಪರಿಷತ್​ ಸದಸ್ಯ ಐವಾನ್​ ಡಿಸೋಜ
author img

By

Published : Oct 20, 2019, 6:21 PM IST

Updated : Oct 20, 2019, 7:23 PM IST

ಮಂಗಳೂರು: ವಿ ಡಿ ಸಾವರ್ಕರ್‌​ಗೆ ಭಾರತರತ್ನ ಪ್ರಶಸ್ತಿ ಕೊಡಬೇಕೆಂದು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಸಾವರ್ಕರ್‌ ಓರ್ವ ಮರಾಠಿ ಬ್ರಾಹ್ಮಣನಾದ ಕಾರಣ ಮಹಾರಾಷ್ಟ್ರದಲ್ಲಿ ಚುನಾವಣೆ ಗೆಲ್ಲಲು ಮಾಡಿದ ತಂತ್ರಗಾರಿಕೆ ಎಂದು ವಿಧಾನ ಪರಿಷತ್​ ಸದಸ್ಯ ಐವಾನ್​ ಡಿಸೋಜ ಆರೋಪಿಸಿದ್ದಾರೆ.

ವಿಧಾನ ಪರಿಷತ್​ ಸದಸ್ಯ ಐವಾನ್​ ಡಿಸೋಜ..

ನಗರದ ಮಲ್ಲಿಕಟ್ಟೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ದೇಶದ ಚರಿತ್ರೆಯನ್ನು ಬಹಳ ಬೇಗ ಮರೆಯುವ ಕಾರ್ಯ ನಡೆಯುತ್ತಿದೆ. ವಿ ಡಿ‌ ಸಾವರ್ಕರ್‌ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆಗೆ ಸಂಚು ರೂಪಿಸಿದವರಲ್ಲಿ ಒಬ್ಬರು. ಈ ದೇಶ ಇಬ್ಭಾಗವಾಗಲು ಕಾರಣವೇ ವಿ ಡಿ ಸಾವರ್ಕರ್‌. ಅಂತವರಿಗೆ ಭಾರತ ರತ್ನ ಕೊಡುತ್ತಿರುವುದು ಅತ್ಯಂತ ದುರಾದೃಷ್ಟಕರ ಎಂದರು‌.

ಇತ್ತೀಚೆಗೆ ಡೊನಾಲ್ಡ್‌ ಟ್ರಂಪ್ ಮೋದಿಯವರಿಗೆ ರಾಷ್ಟ್ರಪಿತ ಎಂದಾಗ ಅದನ್ನ ವಿರೋಧಿಸಲಿಲ್ಲ. ಇದರಿಂದ ಅವರು ದೇಶಕ್ಕೇನು ಸಂದೇಶ ನೀಡಿದ್ದಾರೆ. ಈ ದೇಶದ ಚರಿತ್ರೆಯನ್ನೇ ತಿದ್ದಬೇಕೆನ್ನುವುದು ಅವರ ಉದ್ದೇಶ. ಬಿಜೆಪಿಯವರು 2015ರಲ್ಲಿ ಮೋದಿ ಪ್ರಧಾನಿ ಆದ ಬಳಿಕವೇ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿರುವುದು ಎಂದು ಸಾಧಿಸಲು ಹೊರಟಿದ್ದಾರೆ ಎಂದು ಹೇಳಿದರು.

ಸಿ ಟಿ ರವಿಯವರು ಬಹಳ ಲಘುವಾಗಿ ಸಿದ್ದರಾಮಯ್ಯರ ವಿರುದ್ಧವಾಗಿ ಮಾತನಾಡಿದ್ದಾರೆ. ಅವರ ಪುತ್ರನ ಸಾವಿನ ಪ್ರಕರಣವನ್ನು ಎಳೆದು ತಂದಿದ್ದಾರೆ. ಆದರೆ, ಸಿ ಟಿ ರವಿಯವರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ, ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವವರ ಮರಣಕ್ಕೆ ಕಾರಣವಾಗಿದ್ದು ನಮ್ಮ ಮುಂದಿದೆ. ಸಿ ಟಿ ರವಿ ಹೋಗಿ ಕೋಟಿ ರವಿ ಆಗಿದ್ದು ಹೇಗೆ ಎಂದು ತಿಳಿದಿದೆ. ಅವರಿಂದ ಸಿದ್ದರಾಮಯ್ಯರಿಗೆ ಸಲಹೆ ಸೂಚನೆಗಳು ಬೇಕಾಗಿಲ್ಲ ಎಂದು ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.

Intro:ಮಂಗಳೂರು: ಬಿಜೆಪಿ ವಿ.ಡಿ.ಸಾರ್ವಕರ್ ಗೆ ಭಾರತರತ್ನ ಪ್ರಶಸ್ತಿ ಕೊಡಬೇಕೆಂದು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಸಾರ್ವಕರ್ ಓರ್ವ ಮರಾಠಿ ಬ್ರಾಹ್ಮಣನಾದ ಕಾರಣ ಮಹಾರಾಷ್ಟ್ರದಲ್ಲಿ ಚುನಾವಣೆ ಗೆಲ್ಲಲು ಮಾಡಿದ ತಂತ್ರಗಾರಿಕೆ ಎಂದು ವಿಧಾನ ಪರಿಷತ್ ಶಾಸಕ ಹೇಳಿದರು.

ನಗರದ ಮಲ್ಲಿಕಟ್ಟೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ದೇಶದ ಚರಿತ್ರೆಯನ್ನು ಬಹಳ ಬೇಗ ಮರೆಯುವ ಕಾರ್ಯ ನಡೆಯುತ್ತಿದೆ. ವಿ.ಡಿ‌.ಸಾರ್ವಕರ್ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆಗೆ ಸಂಚು ರೂಪಿಸಿದವರಲ್ಲೋರ್ವ. ಅಲ್ಲದೆ ಈ ದೇಶ ಇಬ್ಭಾಗವಾಗಲು ಕಾರಣವೇ ವಿ.ಡಿ.ಸಾರ್ವಕರ್. ಅಂತವರಿಗೆ ಭಾರತ ರತ್ನ ಕೊಡುತ್ತಿರುವುದು ಅತ್ಯಂತ ದುರಾದೃಷ್ಟಕರ ಎಂದರು‌.

Body:ಡೊನಾಲ್ಡ್‌ ಟ್ರಂಪ್ ಮೊನ್ನೆ ಅಮೇರಿಕಾದಲ್ಲಿ ನಮ್ಮ ದೇಶದ ಪ್ರಧಾನಿಗೆ ನೀವು ರಾಷ್ಟ್ರಪಿತ ಎಂದು ಸಂಭೋದಿಸಿದ್ದರು. ಈ ಸಂದರ್ಭ ಪ್ರಧಾನಿ ಮೋದಿಯವರು ವಿರೋಧಿಸಿ, ನಮ್ಮ ದೇಶಕ್ಕೆ ಒಬ್ಬನೇ ರಾಷ್ಟ್ರಪಿತ ಅದು ಮಹಾತ್ಮ ಗಾಂಧೀಜಿ ಎಂದು ಹೇಳಬೇಕಿತ್ತು. ಇದರಿಂದ ದೇಶಕ್ಕೇನು ಸಂದೇಶ ನೀಡಿದ್ದಾರೆ. ಈ ದೇಶದ ಚರಿತ್ರೆಯನ್ನೇ ತಿದ್ದಬೇಕೆನ್ನುವುದು ಅವರ ಉದ್ದೇಶ. ಬಿಜೆಪಿಯವರು 2015ರಲ್ಲಿ ಮೋದಿ ಪ್ರಧಾನಿ ಆದ ಬಳಿಕವೇ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿರುವುದು ಎಂದು ಸಾಧಿಸಲು ಹೊರಟಿದ್ದಾರೆ ಎಂದು ಹೇಳಿದರು.

ಸಿ.ಟಿ.ರವಿಯವರು ಬಹಳ ಲಘುವಾಗಿ ಸಿದ್ದರಾಮಯ್ಯರ ವಿರುದ್ಧವಾಗಿ ಮಾತನಾಡಿದ್ದಾರೆ. ಅವರ ಪುತ್ರನ ಸಾವಿನ ಪ್ರಕರಣವನ್ನು ಎಳೆದು ತಂದಿದ್ದಾರೆ. ಆದರೆ ಸಿ.ಟಿ.ರವಿಯವರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ, ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವವರ ಮರಣಕ್ಕೆ ಕಾರಣವಾಗಿದ್ದು ನಮ್ಮ ಮುಂದಿದೆ. ಸಿ.ಟಿ.ರವಿ ಹೋಗಿ ಕೋಟಿ ರವಿ ಆಗಿದ್ದು ಹೇಗೆ ಎಂದು ತಿಳಿದಿದೆ. ಅವರಿಂದ ಸಿದ್ದರಾಮಯ್ಯ ರಿಗೆ ಸಲಹೆ ಸೂಚನೆಗಳು ಬೇಕಾಗಿಲ್ಲ ಎಂದು ಐವನ್ ಡಿಸೋಜ ಹೇಳಿದರು.

Reporter_Vishwanath Panjimogaru

Conclusion:
Last Updated : Oct 20, 2019, 7:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.