ಮಂಗಳೂರು: ಕಳೆದ 45 ವರ್ಷಗಳಿಂದ ನಗರದ ಬೋಳೂರು ಸ್ಮಶಾನ ಪರಿಸರ ಹಾಗೂ ಉರ್ವ ಕೊರಗಜ್ಜ ಗುಡಿ ಪರಿಸರದಲ್ಲಿ ವಾಸಿಸುವ ಅನೇಕ ಕುಟುಂಬಗಳು ಹಕ್ಕುಪತ್ರವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದರು. ನಾನು ಶಾಸಕನಾಗಿ ನ್ಯಾಯ ಒದಗಿಸುವ ಭರವಸೆ ನೀಡಿದ್ದೆ. ಇದೀಗ ಕೊಟ್ಟ ಮಾತಿನಂತೆ ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ್ದೇನೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ವಾರ್ಡ್ನಲ್ಲಿ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿ, ಶಾಸಕನಾಗಿ ಆಯ್ಕೆಯಾದ ಮೊದಲಲ್ಲಿ ಬೋಳೂರಿನ ಜನರಿಗೆ ಈ ಕುರಿತು ವಾಗ್ದಾನ ನೀಡಿದ್ದೆ. ಆ ಬಳಿಕ ಅಧಿಕಾರಗಳ ಜೊತೆ ಚರ್ಚಿಸಿ ತಾಂತ್ರಿಕ ತೊಡಕುಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡಕ್ಕೆ ಸೇರಿದ 52 ಕುಟುಂಬಗಳು ಉರ್ವ ಕೊರಗಜ್ಜ ಗುಡಿಯ ಬಳಿ ಹಾಗೂ ಬೋಳೂರು ಸ್ಮಶಾನ ಪರಿಸರದಲ್ಲಿ ವಾಸವಾಗಿವೆ. ಆದರೆ ಈ ಜಾಗಕ್ಕೆ ಸರ್ವೆ ನಂಬರ್ ಇಲ್ಲದೆ ತಾಂತ್ರಿಕ ತೊಡಕು ಉಂಟಾಗಿತ್ತು. ಹಾಗಾಗಿ ಸರ್ವೆ ಇಲಾಖೆಯು ಮತ್ತೆ ಸರ್ವೆ ನಡೆಸಿ ಹೊಸ ಸರ್ವೆ ನಂಬರ್ ನೀಡಿ ಎಲ್ಲಾ ಕುಟುಂಬಗಳಿಗೂ ಹಕ್ಕುಪತ್ರ ಮಂಜೂರು ಮಾಡಲಾಗಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.
ಬೋಳೂರಿನ ಮಾಧವ ಅವರು ಮಾತನಾಡಿ, ಕಳೆದ 45 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಜನಪ್ರತಿನಿಧಿಗಳ ಬಳಿಗೆ, ಅಧಿಕಾರಿಗಳ ಬಳಿ ಹಾಗೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದೆವು. ಆದರೆ ಯಾವುದೂ ಕೂಡ ಫಲ ನೀಡಿರಲಿಲ್ಲ. ಕೊನೆಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಬಳಿ ನಮ್ಮ ಸಂಕಷ್ಟ ಹೇಳಿಕೊಂಡಾಗ ಹಕ್ಕುಪತ್ರ ನೀಡುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ನಮ್ಮ ಶಾಸಕರು ನಡೆದುಕೊಂಡಿದ್ದಾರೆ. ಅವರಿಗೆ ಬೋಳೂರು ಜನತೆಯ ಪರವಾಗಿ ಹಾರ್ಧಿಕ ಶುಭಾಶಯಗಳು ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಜಗದೀಶ್ ಶೆಟ್ಟಿ ಬೋಳೂರು, ತಹಶೀಲ್ದಾರ್ ಗುರುಪ್ರಸಾದ್, ಕಂದಾಯ ಅಧಿಕಾರಿ ಪ್ರಸನ್ನ, ವಿ.ಎ ಪೂರ್ಣಚಂದ್ರ, ಸ್ಥಳೀಯ ಮುಖಂಡರಾದ ರಾಹುಲ್ ಶೆಟ್ಟಿ, ತುಕಾರಾಂ ಬಂಗೇರ, ಯೋಗೀಶ್ ಸಾಲ್ಯಾನ್ ಹಾಗೂ ರಾಜೇಶ್ ಉರ್ವ ಉಪಸ್ಥಿತರಿದ್ದರು.
ಕೊಟ್ಟ ಮಾತಿನಂತೆ ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ್ದೇನೆ : ಶಾಸಕ ವೇದವ್ಯಾಸ ಕಾಮತ್...
ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡಕ್ಕೆ ಸೇರಿದ 52 ಕುಟುಂಬಗಳು ಉರ್ವ ಕೊರಗಜ್ಜ ಗುಡಿಯ ಬಳಿ ಹಾಗೂ ಬೋಳೂರು ಸ್ಮಶಾನ ಪರಿಸರದಲ್ಲಿ ವಾಸವಾಗಿವೆ. ಆದರೆ ಈ ಜಾಗಕ್ಕೆ ಸರ್ವೆ ನಂಬರ್ ಇಲ್ಲದೆ ತಾಂತ್ರಿಕ ತೊಡಕು ಉಂಟಾಗಿತ್ತು. ಹಾಗಾಗಿ ಸರ್ವೆ ಇಲಾಖೆಯು ಮತ್ತೆ ಸರ್ವೆ ನಡೆಸಿ ಹೊಸ ಸರ್ವೆ ನಂಬರ್ ನೀಡಿ ಎಲ್ಲಾ ಕುಟುಂಬಗಳಿಗೂ ಹಕ್ಕುಪತ್ರ ಮಂಜೂರು ಮಾಡಲಾಗಿದೆ ಎಂದು ವೇದವ್ಯಾಸ ಕಾಮತ್ ತಿಳಿಸಿದರು.