ETV Bharat / state

ಕುಮಾರಸ್ವಾಮಿ ಟ್ವೀಟ್​​ ಮಾಡೋ ಬದಲು‌ ವಿಧಾನಸಭೆಯಲ್ಲಿ‌‌ ಚರ್ಚಿಸಲಿ: ಶೆಟ್ಟರ್ ಟಾಂಗ್ - kumaraswamy latest tweet issue

ಸಾಲ ಮನ್ನಾ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿಯವರು ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಜಗದೀಶ್ ಶೆಟ್ಟರ್, ಅಲ್ಲಿ ಇಲ್ಲಿ ಚರ್ಚೆ ಮಾಡೋದರ ಬದಲು ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡಲಿ. ಸರ್ಕಾರದಿಂದಲೇ ಉತ್ತರ ಸಿಗಲಿದೆ ಎಂದರು.

Instead of tweeting Kumaraswamy, let's discuss it in the assembly : Jagadish Shettar
ಕುಮಾರಸ್ವಾಮಿ ಟ್ವೀಟ್ ಮಾಡೋ ಬದಲು‌ ವಿಧಾನಸಭೆಯಲ್ಲಿ‌‌ ಚರ್ಚಿಸಲಿ: ಜಗದೀಶ್ ಶೆಟ್ಟರ್ ಟಾಂಗ್
author img

By

Published : Feb 29, 2020, 6:31 PM IST

ಮಂಗಳೂರು: ಹೆಚ್​.ಡಿ.ಕುಮಾರಸ್ವಾಮಿ ಟ್ವೀಟ್​ ಮಾಡೋದನ್ನು ನಿಲ್ಲಿಸಿ ಸದನದಲ್ಲಿ ಮಾತನಾಡಲಿ. ಬಜೆಟ್ ವಿಷಯದಲ್ಲಿ ಅವರು ವಿಧಾನಸಭೆಯಲ್ಲಿ ಚರ್ಚಿಸಲಿ. ಅದಕ್ಕೆ ಸಿಎಂ ಯಡಿಯೂರಪ್ಪ ಉತ್ತರ ಕೊಡುತ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಟಾಂಗ್​ ನೀಡಿದ್ದಾರೆ.

ಸಚಿವ ಜಗದೀಶ್ ಶೆಟ್ಟರ್

ಸಾಲ ಮನ್ನಾ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿಯವರು ಟ್ವೀಟ್ ಮಾಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಉತ್ತರ ಕೊಡಬೇಕಾದವರು ಹಣಕಾಸು ಸಚಿವರು. ಈ ಖಾತೆ ಮುಖ್ಯಮಂತ್ರಿಯವರಲ್ಲಿದೆ. ಬಜೆಟ್ ಅಧಿವೇಶನ ನಡೆಯುತ್ತಿದೆ. ಕುಮಾರಸ್ವಾಮಿಯವರು ಅಲ್ಲಿ ಇಲ್ಲಿ ಚರ್ಚೆ ಮಾಡೋದರ ಬದಲು ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡಲಿ. ಸರ್ಕಾರದಿಂದಲೇ ಉತ್ತರ ದೊರಕುತ್ತದೆ ಎಂದರು.

ಶ್ರೀಶೈಲ ಸ್ವಾಮೀಜಿ ಹತ್ತು ಜನ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಈ ರೀತಿ ಸ್ವಾಮೀಜಿಗಳು ಹೇಳುತ್ತಾರೆ, ಮತ್ತೊಬ್ಬರೂ ಹೇಳುತ್ತಾರೆ ಎಂದು ಚರ್ಚೆ ಮಾಡೋದರಲ್ಲಿ ಅರ್ಥ ಇಲ್ಲ. ಅದಕ್ಕೆ ನಾವು ಉತ್ತರ ಕೊಡುವುದೂ ಬೇಕಾಗಿಲ್ಲ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರ ಗಟ್ಟಿಯಾಗಿ ನಡೆಯುತ್ತದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.