ಮಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹಳೆ ರೋಗಿಗಳಿಗೆ ಉಚಿತ ಕೊರೊನಾ ಲಸಿಕೆಯನ್ನು ನೀಡಲು ಮಂಗಳೂರಿನ ಇಂಡಿಯಾನ ಆಸ್ಪತ್ರೆ ಮುಂದಾಗಿದೆ.
ಮಂಗಳೂರಿನ ಪಂಪ್ವೆಲ್ನಲ್ಲಿರುವ ಇಂಡಿಯಾನ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಚಿಕಿತ್ಸೆ ಪಡೆದಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಹಳೆ ರೋಗಿಗಳು, ಪ್ರಸಕ್ತ ಚಿಕಿತ್ಸೆ ಪಡೆಯುತ್ತಿರುವ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಸಹ ಕಾಯಿಲೆ ಹೊಂದಿರುವ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲಾಗುತ್ತದೆ.
ಇದನ್ನು ಓದಿ: ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದಿನೇಶ್ ಕಲ್ಲಹಳ್ಳಿ ದೌಡು: ಕದ್ದು ಮುಚ್ಚಿ ಠಾಣೆಗೆ ಬಂದು ಇನ್ಸ್ಪೆಕ್ಟರ್ ಭೇಟಿ
ಲಸಿಕೆ ಪ್ರಕ್ರಿಯೆ ಮೂರನೇ ಹಂತದಲ್ಲಿ ನೀಡಲು ಗುರುತಿಸಲ್ಪಟ್ಟ 20 ಸಾವಿರ ಖಾಸಗಿ ಆಸ್ಪತ್ರೆಯಲ್ಲಿ ಇಂಡಿಯಾನ ಆಸ್ಪತ್ರೆ ಕೂಡ ಒಂದಾಗಿದೆ. ಉಚಿತ ಲಸಿಕೆ ಪಡೆಯುವ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹಳೆಯ ರೋಗಿಗಳು 7259016560 ಗೆ ಕರೆ ಮಾಡಿ ಲಸಿಕೆ ಪಡೆಯುವ ದಿನಾಂಕ ಮತ್ತು ಸಮಯ ಪಡೆದುಕೊಂಡು ಆಧಾರ್ ಕಾರ್ಡ್ ಹಾಜರುಪಡಿಸಿ ಉಚಿತ ಲಸಿಕೆ ಪಡೆಯಬಹುದು ಎಂದು ಇಂಡಿಯಾನ ಆಸ್ಪತ್ರೆ ಸಿಒಒ ವಿಜಯಚಂದ್ರ ಅವರು ತಿಳಿಸಿದ್ದಾರೆ.