ಮಂಗಳೂರು : ಮಂಗಳೂರಿನ ವಿವಿಧೆಡೆ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಹಿನ್ನೆಲೆ ಏಳು ಮಂದಿಯನ್ನು ಇಲ್ಲಿನ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಈ ವೇಳೆ 500 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರಿನ ಆಲಿಸ್ಟರ್, ಪ್ರಥಮ್ ಶೆಟ್ಟಿ, ಪ್ರಥಮ್ ದೇವಾಡಿಗ, ವಿಶ್ವಾಸ್, ಮಂಜುನಾಥ್, ಚಿರಾಗ್ ಮತ್ತು ಕ್ರಿಸ್ ಬಂಧಿತರು. ದ.ಕ ಜಿಲ್ಲಾ ಅಬಕಾರಿ ಅಧೀಕ್ಷಕಿ ಶೈಲಜಾ ಎ ಕೋಟೆ ನಿರ್ದೇಶನದಂತೆ ಮಂಗಳೂರು ವಿಭಾಗದ ಅಬಕಾರಿ ಅಧೀಕ್ಷಕ ವಿನೋದ್ ಕುಮಾರ್ ಮಾರ್ಗದರ್ಶನದಲ್ಲಿ ಹಾಗೂ ಅಬಕಾರಿ ಉಪನಿರೀಕ್ಷಕಿ ಸೀಮಾ ಮರಿಯಾ ಸುವಾರೀಸ್, ಅಬಕಾರಿ ಉಪನಿರೀಕ್ಷಕರಾದ ಪ್ರತಿಭಾ ಜಿ, ಕಮಲಾ ಹೆಚ್ ಎನ್, ಹಾಗೂ ಸಿಬ್ಬಂದಿ ಸಂತೋಷ್ ಕುಮಾರ್, ಸುನೀಲ್, ಉಮೇಶ್ ಎಚ್, ಸಂದೀಪ್ ಕುಮಾರ್ ಮತ್ತು ಮನಮೋಹನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.