ಮಂಗಳೂರು: ಆನ್ಲೈನ್ ಮುಖಾಂತರ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ನಲ್ಲಿತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಿ, 26 ಸಾವಿರ ರೂ. ಹಾಗೂ 4 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡ ಘಟನೆ ನಗರದ ಕಾವೂರಿನಲ್ಲಿ ನಡೆದಿದೆ.
ಕುಮಾರ್, ವಿಶಾಲ್ ಹಾಗೂ ಅಶೋಕ್ ಬಂಧಿತ ಆರೋಪಿಗಳು. ಐಪಿಎಲ್ ಆರಂಭವಾದ ಬಳಿಕ ಇಂತಹ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಗರದಲ್ಲೆಡೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದು ಪೊಲೀಸರು ಪತ್ತೆ ಹಚ್ಚಿದ ನಾಲ್ಕನೇ ಪ್ರಕರಣವಾಗಿದೆ.