ETV Bharat / state

ಕೃಷಿ ಕೆಲಸದ ಮಹಿಳೆಯರಿಗೆ ತನ್ನ ಕಾರಿನಲ್ಲೇ ಡ್ರಾಪ್ ಕೊಟ್ಟ ಶಾಸಕ ಯು.ಟಿ.ಖಾದರ್: ವಿಡಿಯೋ - ಯುಟಿ ಖಾದರ್ ವಿಡಿಯೋ ವೈರಲ್

ಮಂಗಳೂರು ವಿಧಾನಸಭೆ ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರ ಮಾನವೀಯ ಕಾರ್ಯದ ವಿಡಿಯೋ ಒಂದು ವೈರಲ್ ಆಗಿದೆ.

Humanitarian work
ಮಾನವೀಯ ಕಾರ್ಯ
author img

By

Published : Jun 28, 2021, 6:47 AM IST

ಮಂಗಳೂರು: ಕೃಷಿ ಕೆಲಸಕ್ಕೆಂದು ತೆರಳುತ್ತಿದ್ದ ಮಹಿಳೆಯರನ್ನು ಶಾಸಕ ಯು.ಟಿ.ಖಾದರ್ ತನ್ನ ಕಾರಿನಲ್ಲಿ ಕರೆದೊಯ್ದ ವಿಡಿಯೋ ವೈರಲ್ ಆಗಿದೆ.

ವೈರಲ್ ವಿಡಿಯೋ

ಖಾದರ್ ಅವರು ಕಾರ್ಯ ನಿಮಿತ್ತ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದರು. ಆಗ ಇಬ್ಬರು ಹಿರಿ ವಯಸ್ಸಿನ ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ, ಚಾಲಕನಿಗೆ ಸೂಚಿಸಿ ಕಾರು ನಿಲ್ಲಿಸಿದ್ದಾರೆ. ಇಬ್ಬರನ್ನೂ ಕಾರಿನಲ್ಲಿ ಹತ್ತಿಸಿಕೊಂಡ ಖಾದರ್‌, ಅವರಲ್ಲಿ ಎಲ್ಲಿಗೆ ಹೋಗುವುದೆಂದು ವಿಚಾರಿಸಿದ್ದಾರೆ. ಈ ವೇಳೆ ಓರ್ವ ಮಹಿಳೆ ಸಮೀಪದ ನಾಗಬನಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾರೆ‌.

ವೀಕ್ಷಿಸಿ: ಸಿಗಂದೂರು ಲಾಂಚ್​ನಿಂದ ನದಿಗೆ ಹಾರಿದ ಮಹಿಳೆ : ಮುಂದೇನಾಯ್ತು?

ಮತ್ತೋರ್ವ ಮಹಿಳೆ ನಗರದ ಕೊಣಾಜೆಯ ಕೆಳಗಿನ ಮನೆಯ ಹಡೀಲು ಬಿದ್ದ ಭೂಮಿಯಲ್ಲಿ ನಾಗಬ್ರಹ್ಮ ಪ್ರಗತಿಪರ ಸಂಘ ಹಾಗೂ ಊರಿನ ಪ್ರಮುಖರು ಸೇರಿ ಭತ್ತ ಕೃಷಿ ಮಾಡುವಲ್ಲಿಗೆ ನಾಟಿ ಕೆಲಸಕ್ಕಾಗಿ ತೆರಳುತ್ತಿದ್ದೇನೆ ಎಂದಿದ್ದಾರೆ. ಅವರನ್ನು ಖಾದರ್ ಅವರೇ ತಮ್ಮ ಕಾರಿನಲ್ಲಿ ಕುಳ್ಳಿರಿಸಿ ಡ್ರಾಪ್ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.