ETV Bharat / state

ಮೂರು ಮನೆಗಳಲ್ಲಿ ಕಳವು, ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳ!

ಒಂದೇ ದಿನದಲ್ಲಿ ಸರಣಿ ಕಳ್ಳತನ ನಡೆಸಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

Kn_mng_ullal_01
ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳ
author img

By

Published : Sep 10, 2022, 2:06 PM IST

ಉಳ್ಳಾಲ: ಸೋಮೇಶ್ವರ ಬೀಚ್ ಬಳಿಯ ಹೋಂ ಸ್ಟೇ ಸೇರಿದಂತೆ ಉಳ್ಳಾಲ ಠಾಣೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊವಾಝ್ (35) ಬಂಧಿತ ಆರೋಪಿ. ಮೊವಾಝ್​ ನಿನ್ನೆ ಸಂಜೆ ಸೋಮೇಶ್ವರ ಬಸ್ಸು ತಂಗುದಾಣದ ಬಳಿಯ ಪ್ರಶಾಂತ್ ಎಂಬುವವರ ಮನೆಯ ಹಿಂಬಾಗಿಲಿನ ಬೀಗ ಒಡೆದು ಮನೆಯಲ್ಲಿದ್ದ 26 ಗ್ರಾಂ ಚಿನ್ನ ಹಾಗೂ 3,000 ರೂಪಾಯಿ ಹಣ ದೋಚಿ ಪರಾರಿಯಾಗಿದ್ದ.

ಅಲ್ಲದೆ ರಾತ್ರಿ ಉಳ್ಳಾಲ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದು, ಗುಡಿಯಲ್ಲಿನ ಹಿತ್ತಾಳೆ ಪರಿಕರಗಳು ಹಾಗೂ ಹುಂಡಿಯ ಬೀಗ ಒಡೆದು ಕಾಣಿಕೆ ಹಣವನ್ನೂ ಕದ್ದಿದ್ದಾನೆ. ಅಲ್ಲದೇ ದೇವಸ್ಥಾನದ ಸಿಬ್ಬಂದಿಯಾದ ಪ್ರಸಾದ್ ಅವರ ಮನೆಯ ಹಿಂಬಾಗಿಲಿನ ಬೀಗ ಒಡದು 56 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದ. ಈ ವೇಳೆ ಸಿಸಿಟಿವಿಯಲ್ಲಿ ಮೊವಾಝ್​ನ ಚಹರೆ ಸೆರೆಯಾಗಿತ್ತು.

ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳ

ಇನ್ನು, ಕಳೆದ ಬುದವಾರ ಸಂಜೆ ಆರೋಪಿ ಮೊವಾಝ್​ ನಮೋ ಹೆರಿಟೇಜ್ ಎಂಬ ಹೋಂ ಸ್ಟೇ ಕಟ್ಟಡಕ್ಕೆ ನುಗ್ಗಿ ಅಲ್ಲಿಯ ರೂಮಿನ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಿದ್ದಾನೆ. ಆದರೇ, ರೂಮಿನಲ್ಲಿ ಏನು ಸಿಗದೆ ಖಾಲಿ ಕೈಯಿಂದ ಹಿಂತಿರುಗಿದ್ದಾನೆ. ಈ ಕೃತ್ಯದ ವಿಡಿಯೋವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರೋಪಿ ಮೊವಾಝ್ ಈ ಹಿಂದೆ ಉಳ್ಳಾಲದಲ್ಲಿ ನಡೆದಂತಹ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೇರಳದ ಕಣ್ಣೂರಿನ ಪತ್ನಿ ಮನೆಯಲ್ಲಿ ನೆಲೆಸಿರುವ ಈತ ಆಗಾಗ್ಗೆ ಮಂಗಳೂರಿಗೆ ಬಂದು ಕಳ್ಳತನ ನಡೆಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಗಂಡನಿಂದ ಮನೆಗೆ ಗಂಡಾಂತರ ಎಂದು ಹಣ ಪೀಕಿದ್ದ ಕಳ್ಳ ಜ್ಯೋತಿಷಿ, ಬಾಲಕನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.