ಬೆಳ್ತಂಗಡಿ: ತಾಲೂಕಿನ ದಿಡುಪೆ, ಕಿಲ್ಲೂರು, ಕುಕ್ಕಾವು, ಮಿತ್ತಬಾಗಿಲು, ಮಲವಂತಿಗೆ ಭಾಗದಲ್ಲಿ ಸಂಜೆಯಿಂದ ಸತತ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ.
ನೇತ್ರಾವತಿ ಹಾಗೂ ಮೃತ್ಯುಂಜಯ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿ ಮಳೆ ಬಂದು, ತಗ್ಗು ಪ್ರದೇಶಗಳೆಲ್ಲ ನೀರಿನಿಂದ ಮುಳುಗಿದ್ದವು.
ಕಳೆದ ಬಾರಿ ನೆರೆ ಸಂದರ್ಭದಲ್ಲಿ ನದಿಯಲ್ಲಿ ಮರಳು ಹಾಗೂ ಕಸಕಡ್ಡಿ ಮರಗಳನ್ನು ತೆರವುಗೊಳಿಸದೇ ಇರುವುದರಿಂದ ಈ ಸಲದ ಮಳೆಗೆ ನೆರೆ ಬರಲು ಕಾರಣವಾಗಬಹುದು ಎಂದು ಜನರು ಆತಂಕ ಪಟ್ಟಿದ್ದಾರೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಇದೊಂದು ಕಾರಣವಾಗಬಹುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.