ಬಂಟ್ವಾಳ (ದಕ್ಷಿಣಕನ್ನಡ): ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಬಂಟ್ವಾಳ ತಾಲೂಕಿನ ಹಲವು ಮನೆಗಳಿಗೆ ಹಾನಿಯಾಗಿದೆ.
ಶಂಭೂರು ಗ್ರಾಮದ ಬೂತಲೆಮಾರು ಎಂಬಲ್ಲಿ ಮುತ್ತಮ್ಮ ಎಂಬುವರ ಮನೆಗೆ ಹಾನಿಯಾಗಿದೆ. ಇದೇ ಗ್ರಾಮದ ಕರ್ತಪಾಲು ಎಂಬಲ್ಲಿ ಸುಂದರ ಎಂಬುವರ ಮನೆ ಕೂಡ ಸಂಪೂರ್ಣ ಜಖಂಗೊಂಡಿದೆ.
ಸಜಿಪಮುನ್ನೂರು ಗ್ರಾಮದ ಮಡಿವಾಳಪಡಿಪು ಎಂಬಲ್ಲಿ ಮಾಂಕು ಮಡಿವಾಳ ಎಂಬುವವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ. ಇದೇ ಗ್ರಾಮದ ಮಿತ್ತ ಕಟ್ಟ ಎಂಬಲ್ಲಿ ಲಲಿತ ಎಂಬವರ ಮನೆಗೆ ಸಿಡಿಲು ಬಡಿದಿದೆ.
ಓದಿ: ಕೊರೊನಾ ಮರೆತು ಸೆಲ್ಫಿಗಾಗಿ ಸಿದ್ದರಾಮಯ್ಯಗೆ ಮುಗಿಬಿದ್ದ ಅಭಿಮಾನಿಗಳು..!