ETV Bharat / state

ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ತಮ್ಮ ವಿಧಾನಸಭಾ ಕ್ಷೇತ್ರದ ಜನರ ಬಗ್ಗೆ ಹರೀಶ್ ಪೂಂಜಾ ಬೇಸರ

ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಪ್ರಭು ಶ್ರೀರಾಮಚಂದ್ರ ವನವಾಸ ಅನುಭವಿಸಿದಂತೆ, ಪಾಂಡವರು ಅಜ್ಞಾತವಾಸ ಅನುಭವಿಸಿದಂತೆ ನಾವೂ ಕೂಡಾ ನಮ್ಮ ಪ್ರೀತಿ ಪಾತ್ರರಿಂದ ದೂರ ಇದ್ದು ನೋವನ್ನು ಅನುಭವಿಸಬೇಕಿದೆ ಎಂದು ಹರೀಶ್ ಪೂಂಜಾ ಆಪ್ತರಲ್ಲಿ ನೋವು ತೋಡಿಕೊಂಡಿದ್ದಾರೆ.

author img

By

Published : Apr 14, 2020, 5:35 PM IST

Harish Poonja
ಹರೀಶ್ ಪೂಂಜಾ

ಬೆಳ್ತಂಗಡಿ (ದಕ್ಷಿಣ ಕನ್ನಡ): ಕೊರೊನಾ ಲಾಕ್​ ಡೌನ್​​​​​​​​​​ನಿಂದ ನಮ್ಮ ರಾಜ್ಯದ ಜನರು ಇಲ್ಲಿಗೆ ಮರಳಲು ಸಾಧ್ಯವಾಗದೆ ಇತರ ದೇಶಗಳಲ್ಲಿ ಹಾಗೂ ಇತರ ರಾಜ್ಯಗಳಲ್ಲಿ ಸಿಲುಕಿದ್ದಾರೆ. ಅಂತವರಿಗೆ ನಾವು ಸಹಾಯ ಮಾಡಬೇಕು. ಎಲ್ಲರನ್ನೂ ಅವರವರ ಕುಟುಂಬಗಳೊಂದಿಗೆ ಸೇರಿಸುವ ಪ್ರಯತ್ನ ಮಾಡಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.

ದೇಶದ ನಾನಾ ಭಾಗಗಳಲ್ಲಿ ಸಿಲುಕಿಕೊಂಡವರನ್ನು ಕನಿಷ್ಠ ಪಕ್ಷ ಊರಿಗಾದರೂ ಬರುವ ವ್ಯವಸ್ಥೆ ಮಾಡಬೇಕು ಎಂಬುದು ನನ್ನ ಆಸೆ. ಆದರೆ ಪರಿಸ್ಥಿತಿ ಅದಕ್ಕೆ ಸ್ವಲ್ಪವೂ ಪೂರಕವಾಗಿಲ್ಲ. ಈ ವಿಚಾರವಾಗಿ ನನಗೆ ಎಷ್ಟೋ ಮಂದಿ ಫೋನ್ ಮಾಡುತ್ತಾರೆ. ಅವರಿಗೂ ಸಮಸ್ಯೆ ಏನು ಎಂದು ಗೊತ್ತು. ಆದರೆ ಕೊನೆಯ ಪ್ರಯತ್ನ ಎನ್ನುವಂತೆ ಅವರು ನನಗೆ ಫೋನ್ ಮಾಡುತ್ತಾರೆ. ಈ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಪ್ರಭು ಶ್ರೀರಾಮಚಂದ್ರ ವನವಾಸ ಅನುಭವಿಸಿದಂತೆ, ಪಾಂಡವರು ಅಜ್ಞಾತವಾಸ ಅನುಭವಿಸಿದಂತೆ ನಾವೂ ಕೂಡಾ ನಮ್ಮ ಪ್ರೀತಿ ಪಾತ್ರರಿಂದ ದೂರ ಇದ್ದು ನೋವನ್ನು ಅನುಭವಿಸಬೇಕಿದೆ ಎಂದು ಹರೀಶ್ ಪೂಂಜಾ ಆಪ್ತರಲ್ಲಿ ನೋವು ತೋಡಿಕೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.