ETV Bharat / state

ಪ್ರಿತಿಸಿ ಮದುವೆಯಾದ 5 ತಿಂಗಳಿಗೇ ಕಿರುಕುಳ ಆರೋಪ: ಪತಿ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ

ಪ್ರೀತಿಸಿ ಮದುವೆಯಾಗಿದ್ದ ಪೊಲೀಸ್​ ಕಾನ್ಸ್​ಟೆಬಲ್​ವೊಬ್ಬ ಈಗ ಪತ್ನಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಂಡನ ವಿರುದ್ಧ ಪತ್ನಿಯೇ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಪುತ್ತೂರು ತಾಲೂಕಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

author img

By

Published : Jun 18, 2020, 3:07 PM IST

ಪೊಲೀಸ್​ ಕಾನ್​ಸ್ಟೇಬಲ್​​ ಪತ್ನಿಗೆ ಕಿರುಕುಳ ಆರೋಪ

ಪುತ್ತೂರು: ಇಲ್ಲಿನ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ಸ್​​ಟೆಬಲ್​ವೊಬ್ಬ ಪತ್ನಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಪತಿ ತನಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದಾರೆ.

ಐದು ತಿಂಗಳ ಹಿಂದೆಯಷ್ಟೇ ಸಬ್‌ರಿಜಿಸ್ಟ್ರಾರ್​ ಕಚೇರಿಯಲ್ಲಿ ಇವರಿಬ್ಬರ ವಿವಾಹ ನೋಂದಣಿ ಆಗಿತ್ತು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ಸ್​​ಟೆಬಲ್ ಶಾಂತಕುಮಾರ್ ಅವರ ಪತ್ನಿ ಅಶ್ವಿನಿ ಶಾರದಾ(27), ದೈಹಿಕ ಮತ್ತು ಮಾನಸಿಕ ಹಿಂಸೆಗೊಳಗಾಗಿರುವುದಾಗಿ ದೂರು ನೀಡಿದವರು. ಜೂ.16ರಂದು ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

'ಪ್ರೀತಿಸಿ ನಾವಿಬ್ಬರು ವಿವಾಹ ಆಗಿದ್ದೆವು. ಮದುವೆಯಾದ ಬಳಿಕ ಶಾಂತಕುಮಾರ್ ನನ್ನ ಜೊತೆ ಅನ್ಯೋನ್ಯತೆಯಿಂದ ಇರದೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು. ಹಾಗಾಗಿ ನಾನು ಪಡ್ನೂರಿನಲ್ಲಿ ನನ್ನ ತಾಯಿ ಮನೆಯಲ್ಲೇ ಇದ್ದು, ಆಗಾಗ್ಗೆ ಸಂಪ್ಯದಲ್ಲಿರುವ ಗಂಡನ ವಸತಿ ಗೃಹಕ್ಕೆ ಬಂದು ಹೋಗುತ್ತಿದ್ದೆ. ಇತ್ತೀಚೆಗೆ ನನ್ನ ಗಂಡ ನನ್ನ ಜೊತೆ ಮಾತನಾಡದೆ ನನ್ನ ಮೊಬೈಲ್ ನಂಬರ್‌ನ್ನೂ ಕೂಡಾ ಬ್ಲಾಕ್ ಮಾಡಿದ್ದರು. ಜೂ.16 ರಂದು ನಾನು ಮಧ್ಯಾಹ್ನ ಗಂಡನನ್ನು ಮಾತನಾಡಿಸಲೆಂದು ಪೊಲೀಸ್ ವಸತಿ ಗೃಹಕ್ಕೆ ಹೋಗಿದ್ದೆ. ಆ ಸಮಯ ನನ್ನನ್ನು ನಿಂದಿಸಿ, ಜೀವ ಬೆದರಿಕೆ ಹಾಕಿದ್ದಲ್ಲದೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ' ಎಂದು ಅಶ್ವಿನಿ ಆರೋಪಿಸಿದ್ದಾರೆ.

ನನ್ನ ಗಂಡ ನನಗೆ ಪದೇ ಪದೇ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು ಮುಂದೆ ನನ್ನ ಜೀವಕ್ಕೂ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಕೋರಿದ್ದಾರೆ. ಸಂಪ್ಯ ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 504, 506, 324, ಮತ್ತು 498(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

2019 ಡಿ.30 ರಂದು ಅಶ್ವಿನಿ ಮತ್ತು ಶಾಂತಕುಮಾರ್ ಅವರ ವಿವಾಹ ನೋಂದಣಿ ಪುತ್ತೂರು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದಿತ್ತು. ಪ್ರಸ್ತುತ ಅಶ್ವಿನಿಯವರು ತಂದೆ ಮನೆಯಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.