ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾನಗರ ಶ್ರೀ ಓಂಕಾರೇಶ್ವರಿ ಭಜನಾ ಮಂದಿರ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಮಂದಿರದ ಅವಶ್ಯಕತೆಗಾಗಿ ಬಾವಿ ನಿರ್ಮಿಸಲಾಗಿದೆ.
ಓಂಕಾರೇಶ್ವರೀ ಭಜನಾ ಮಂದಿರಕ್ಕೆ ಬಾವಿಯ ಅಗತ್ಯತೆ ಮನಗಂಡು ಸ್ಥಳೀಯ ಉತ್ಸಾಹಿ ಯುವಕರು ಹಿರಿಯರ ಮಾರ್ಗದರ್ಶನದೊಂದಿಗೆ ಶ್ರಮದಾನದ ಮೂಲಕ ಬಾವಿ ತೋಡಲು ತೀರ್ಮಾನಿಸಿದ್ದರು. ಕಳೆದ ಏಪ್ರಿಲ್ 28 ರಂದು 25 ಮಂದಿ ಯುವಕರ ತಂಡ ಬಾವಿ ನಿರ್ಮಾಣ ಕಾರ್ಯ ಆರಂಭಿಸಿತ್ತು. ಒಂದು ವಾರಗಳ ಕಾಲ ನಿರಂತರ ಬಾವಿ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸ್ಥಳೀಯ ಮನೆಯವರು ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟ ನೀಡಿ ಸಹಕರಿಸಿದ್ದರು.
ಯುವಕರ ಪ್ರಯತ್ನದ ಫಲವಾಗಿ ಬಾವಿಯಲ್ಲಿ ನೀರು ದೊರಕಿದ್ದು, ಲಾಕ್ಡೌನ್ ಸಮಯವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಿಕೊಂಡ ಯುವಕರ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.