ETV Bharat / state

ಈಗಾಗಲೇ ಅವನನ್ನು ವಿವಾಹವಾಗಿದ್ದೇನೆಂದು ಮದುವೆ ಮಂಟಪಕ್ಕೆ ಬಂದ ಮಹಿಳೆ: ವಧುವಿನೊಂದಿಗೆ ಮದುಮಗ ಪರಾರಿ

ಪಡುಪಣಂಬೂರು ಬಳಿಯ ಕಲ್ಯಾಣ ಮಂಟಪವೊಂದರಲ್ಲಿ ಶಿವಮೊಗ್ಗ-ಮೂಡುಬಿದಿರೆ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್‌ನ ಚಾಲಕನ ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ, ತಾನು ಈಗಾಗಲೇ ಆತನನ್ನು ಮದುವೆಯಾಗಿದ್ದೇನೆ ಎಂದು ಓರ್ವ ಮಹಿಳೆ ಕಲ್ಯಾಣ ಮಂಟಪದ ಹೊರಗಡೆ ಗಲಾಟೆ ಆರಂಭಿಸಿದ್ದಾಳೆ.

ಮದುವೆ ವೇಳೇ ವಧುವಿನೊಂದಿಗೆ ಪರಾರಿಯಾದ ವರ  ಮದುವೆ ವೇಳೇ ವಧುವಿನೊಂದಿಗೆ ಪರಾರಿಯಾದ ವರ
ಮದುವೆ ವೇಳೇ ವಧುವಿನೊಂದಿಗೆ ಪರಾರಿಯಾದ ವರ
author img

By

Published : May 5, 2022, 10:55 PM IST

ಮಂಗಳೂರು: ಮದುವೆ ಮಂಟಪಕ್ಕೆ ವರನ ಮೊದಲ ಹೆಂಡತಿ ಎಂದು ಹೇಳಿ ಮಹಿಳೆಯೊಬ್ಬಳು ಬಂದಿದ್ದನ್ನು ನೋಡಿ ವರ ವಧುವಿನೊಂದಿಗೆ ಕಲ್ಯಾಣಮಂಟಪದಿಂದಲೇ ಕಾಲ್ಕಿತ್ತ ಘಟನೆ ಮಂಗಳೂರಿನ ಪಡುಪಣಂಬೂರಿನಲ್ಲಿ ನಡೆದಿದೆ.

ಪಡುಪಣಂಬೂರು ಬಳಿಯ ಕಲ್ಯಾಣ ಮಂಟಪವೊಂದರಲ್ಲಿ ಶಿವಮೊಗ್ಗ- ಮೂಡುಬಿದಿರೆ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್‌ನ ಚಾಲಕನ ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ, ತಾನು ಈಗಾಗಲೇ ಆತನನ್ನು ಮದುವೆಯಾಗಿದ್ದೇನೆ ಎಂದು ಓರ್ವ ಮಹಿಳೆ ಕಲ್ಯಾಣ ಮಂಟಪದ ಹೊರಗಡೆ ಗಲಾಟೆ ಆರಂಭಿಸಿದ್ದಾಳೆ. ಈ ಬಗ್ಗೆ ಮಾಹಿತಿ ಅರಿತ ವರ ಸಸಿಹಿತ್ಲು ಮೂಲದ ಪ್ರೀತಿಸಿದ ವಧುವನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ವರನ ಕಡೆಯಿಂದ ಐದು ಮಂದಿ ಮಾತ್ರ ಮದುವೆಗೆ ಬಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮುಲ್ಕಿ ಠಾಣಾ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸಾವಿರ ಕೋಟಿ ವೆಚ್ಚದಲ್ಲಿ 6,500 ಶಾಲಾ ಕೊಠಡಿಗಳ ನಿರ್ಮಾಣ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.