ಪುತ್ತೂರು: ಅನ್ನದಾನಕ್ಕಿಂತ ಶ್ರೇಷ್ಠದಾನ ಬೇರೊಂದಿಲ್ಲ. ಅಕ್ಷಯ ಪಾತ್ರೆ ಮೂಲಕ ಇಸ್ಕಾನ್ ಸಂಸ್ಥೆಯು ಹಸಿವು ನೀಗಿಸುವ ಕೆಲಸ ಮಾಡುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಸೋಮವಾರ ಪುತ್ತೂರು ಎಪಿಎಂಸಿ ರೈತ ಸಮುದಾಯ ಭವನದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಯೋಜನೆ ಮೂಲಕ ತಾಲೂಕಿನ ದೈವಾರಾಧಕರು ಮತ್ತು ಬ್ಯಾಂಡ್ ವಾಲಗದವರಿಗೆ, ಟ್ಯಾಕ್ಸಿ ಚಾಲಕರಿಗೆ ದಿನಸಿ ಕಿಟ್ ವಿತರಿಸಿದರು. ಟೂರಿಸ್ಟ್ ವಾಹನ ಚಾಲಕರಿಗೂ ಕಿಟ್ ವಿತರಿಸಲಾಯಿತು.
ಪ್ರಧಾನಿ ಮೋದಿ ಅವರ ಸರ್ವಜನ ಹಿತದ ಕೆಲಸವನ್ನು ಇಸ್ಕಾನ್ ಸಂಸ್ಥೆ ಮಾಡುತ್ತಿದೆ. ಈ ಮೂಲಕ ದುರ್ಬಲರ ಹಸಿವು ನೀಗಿಸುತ್ತಿದೆ. ಸಂಸ್ಥೆಯ ವತಿಯಿಂದ ಜಿಲ್ಲೆಯಲ್ಲಿ 7,000 ಕಿಟ್‌ಗಳನ್ನು ವಿತರಿಸಲಾಗಿದೆ. ಮೂರು ಲಕ್ಷ ಮಂದಿಗೆ ಅನ್ನದಾನ ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಪ್ರಸನ್ನ ಇತರರು ಇದ್ದರು.