ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ 2020ರ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಹತ್ತು ಮಂದಿ ಸರ್ಕಾರಿ ನೌಕರರನ್ನು ಆಯ್ಕೆ ಮಾಡಲಾಗಿದೆ.
- ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ರಾಮಕೃಷ್ಣ ರಾವ್
- ಕಾರ್ಮಿಕ ಅಧಿಕಾರಿ ವಿಲ್ಮ ಎಲಿಜಬೆತ್ ತೌವ್ರೋ
- ವತ್ಸಲ, ಉಪತಹಶೀಲ್ದಾರರು ತಾಲೂಕು ಕಚೇರಿ ಮಂಗಳೂರು
- ಸುಳ್ಯ ಕೊರಗಪ್ಪ, ಕಂದಾಯ ನಿರೀಕ್ಷಕರು ತಾಲೂಕು ಕಚೇರಿ
- ಬಿ ಉಗ್ಗಪ್ಪ ಮೂಲ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್
- ಆನಂದ ಎಸ್. ಬಂಜನ್, ಸಹಾಯಕ ಇಂಜಿನಿಯರ್ ಮಂಗಳೂರು
- ಸುಮಂಗಲ, ದ್ವಿತೀಯ ದರ್ಜೆ ಸಹಾಯಕರು
- ರತ್ನಾಕರ ಕೊಠಾರಿ, ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು ಮಂಗಳೂರು
- ಪ್ರಕಾಶ್ ನಾಯಕ್, ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯ, ಮಂಗಳೂರು
- ಎಂ ದೇವದಾಸ, ಹಿರಿಯ ವಾಹನ ಚಾಲಕ ಕೃಷಿ ಇಲಾಖೆ ಜಿಲ್ಲಾ ಪಂಚಾಯತ್ ಮಂಗಳೂರು
ಜನವರಿ 26ರಂದು ನೆಹರು ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದವರಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.