ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ. ನವೆಂಬರ್ 10 ರಂದು ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದ ನಾಲ್ವರು ಪುರುಷ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗಿತ್ತು. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಬಯಲಿಗೆಳೆದಿದ್ದಾರೆ.
ಇದನ್ನೂ ಓದಿ: ಪಾದರಕ್ಷೆ, ಬನಿಯಾನ್, ಗುದನಾಳದಲ್ಲೂ ಚಿನ್ನ..: 10 ದಿನ, ₹1.46 ಕೋಟಿಯ ಮಾಲು ವಶ
ತಪಾಸಣೆ ನಡೆಸಿದಾಗ ಟ್ರಾಲಿ ಬ್ಯಾಗ್ಗಳಲ್ಲಿ ಮರೆಮಾಚಿದ ಚಿನ್ನ ದೊರೆತಿದೆ. ಇದರಲ್ಲಿ 3 ಕೆಜಿ 895 ಗ್ರಾಂನ 24 ಕ್ಯಾರೆಟ್ ಶುದ್ಧತೆಯ ಚಿನ್ನವಿತ್ತು. ಚಿನ್ನ ಮತ್ತು ನಾಲ್ವರು ಪ್ರಯಾಣಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.