ಮಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಗುಜರಾತ್ ಮೂಲದ ಇಬ್ರಾಹಿಮ್ ಕೊಲಾಡ್ ಮತ್ತು ಭಟ್ಕಳದ ಮೊಹಮ್ಮದ್ ಬಶೀರ್ ರಕ್ನುದ್ದೀನ್ ಬಂಧಿತರು. ನಿನ್ನೆ ಇವರಿಬ್ಬರೂ ದುಬೈನಿಂದ ಇಂಡಿಗೋ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದರು.
ತಪಾಸಣೆ ವೇಳೆ ಓರ್ವ ಪ್ರಯಾಣಿಕನ ಮೇಕಪ್ ಫೌಂಡೇಶನ್ ಬಾಕ್ಸ್ನಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮತ್ತೋರ್ವ ಕಂಕುಳಲ್ಲಿ ಪ್ಲಾಸ್ಟರಿಂಗ್ ಹಾಕಿಕೊಂಡು ಪೌಡರ್ ರೂಪದಲ್ಲಿ ಅಕ್ರಮವಾಗಿ ಬಂಗಾರ ಸಾಗಣೆ ಮಾಡುತ್ತಿದ್ದ.
ಇದನ್ನೂ ಓದಿ: ಬಿಸಿಯೂಟ ಸೇವಿಸಿ 5 ವರ್ಷದ ಬಾಲಕಿ ಸಾವು ಆರೋಪ: ಪ್ರಾಂಶುಪಾಲ ಅಮಾನತು
ಒಟ್ಟು 238 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಂಡ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.