ETV Bharat / state

ಹೋಟೆಲ್​​ನಲ್ಲಿ ಅಕ್ರಮ ವಸ್ತುಗಳ ಮಾರಾಟ: ಕಡಬ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲೆಟಿನ್ ಕಡ್ಡಿ ಮಾರಾಟ

ಲಾವತ್ತಡ್ಕದ ಹೋಟೆಲೊಂದಕ್ಕೆ ಜಿಲೆಟಿನ್ ಕಡ್ಡಿಯನ್ನು ಅಕ್ರಮವಾಗಿ ಸರಬರಾಜು ಮಾಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Gelatin stick sale in Dakshina Kannada district
ಇಬ್ಬರು ಆರೋಪಿಗಳನ್ನು ಬಂಧಿಸಿದ ಕಡಬ ಪೊಲೀಸರು
author img

By

Published : Mar 20, 2020, 8:42 AM IST

ಕಡಬ(ದಕ್ಷಿಣ ಕನ್ನಡ): ಜಿಲೆಟಿನ್ ಕಡ್ಡಿಯನ್ನು ಅಕ್ರಮವಾಗಿ ಸರಬರಾಜು ಮಾಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸೋಮವಾರಪೇಟೆ ನಿವಾಸಿ ಚಂದ್ರ(60) ಹಾಗೂ ಸಕಲೇಶಪುರ ನಿವಾಸಿ ನಿತ್ಯಾನಂದ (28) ಎಂದು ಗುರುತಿಸಲಾಗಿದೆ.

ಲಾವತ್ತಡ್ಕದ ಹೋಟೆಲ್​​ನಲ್ಲಿ ಜಿಲೆಟಿನ್ ಕಡ್ಡಿ, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದ ಕಡಬ ಪೊಲೀಸರು, ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡು ಹೋಟೆಲ್ ಮಾಲಕ ಸತೀಶ ಎಂಬಾತನನ್ನು ಈಗಾಗಲೇ ಬಂಧಿಸಿದ್ದರು. ಪ್ರಕರಣ ಕುರಿತು ತನಿಖೆ‌ ನಡೆಸಿದ ಪೊಲೀಸರು, ಹೋಟೆಲ್​ಗೆ ಜಿಲೆಟಿನ್ ಕಡ್ಡಿಗಳನ್ನು ಸರಬರಾಜು ಮಾಡುತ್ತಿದ್ದ, ಕಲ್ಲು ಕೋರೆಯ ಕಾರ್ಮಿಕರಾದ ಚಂದ್ರ ಹಾಗೂ ನಿತ್ಯಾನಂದನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.