ETV Bharat / state

ಪಶ್ಚಿಮ ಬಂಗಾಳದ ಇಬ್ಬರು ಮೀನುಗಾರರಿಗೆ ಮಂಗಳೂರಿನಲ್ಲಿ ಅಂತ್ಯಕ್ರಿಯೆ - ಪಶ್ಚಿಮ ಬಂಗಾಳದ ಮೀನುಗಾರರ ಅಂತ್ಯಕ್ರಿಯೆ

ಏಪ್ರಿಲ್ 13 ರಂದು ಮಂಗಳೂರು ಬಳಿ ಅರಬ್ಬಿ ಸಮುದ್ರದಲ್ಲಿ ನಡೆದ ಬೋಟ್ ದುರಂತದಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರೆದಿದ್ದು, ಪತ್ತೆಯಾದ ಇಬ್ಬರು ಮೀನುಗಾರರ ಅಂತ್ಯಕ್ರಿಯೆ ನಡೆಸಲಾಯಿತು. ​

Funeral of Fishermen's who died in Boat tragedy held at Mangaluru
ಪಶ್ಚಿಮ ಬಂಗಾಳದ ಮೀನುಗಾರರ ಅಂತ್ಯಕ್ರಿಯೆ
author img

By

Published : Apr 20, 2021, 12:47 PM IST

ಮಂಗಳೂರು: ನವ ಮಂಗಳೂರು ಬಂದರು ಬಳಿ ಅರಬ್ಬಿ ಸಮುದ್ರದಲ್ಲಿ ನಡೆದ ಬೋಟ್​ ದುರಂತದಲ್ಲಿ ಮೃತಪಟ್ಟ ಪ. ಬಂಗಾಳ ಮೂಲದ ಇಬ್ಬರು ಮೀನುಗಾರರ ಅಂತ್ಯಕ್ರಿಯೆಯನ್ನು ಮಂಗಳೂರಿನ ನಂದಿಗುಡ್ಡೆಯ ಸ್ಮಶಾನದಲ್ಲಿ ನಡೆಸಲಾಯಿತು.

ದುರಂತದಲ್ಲಿ ಮೃತಪಟ್ಟ ಮೀನುಗಾರರಾದ ಸುಬಲ್ ದಾಸ್ ಹಾಗೂ ಸುಬುಲ್ ದಾಸ್ ಕುಟುಂಬ ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಮಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ಮೃತದೇಹ ಕೊಂಡೊಯ್ಯುವಷ್ಟು ಶಕ್ತರಾಗಿಲ್ಲ. ಆದ್ದರಿಂದ ಮೃತದೇಹಕ್ಕೆ ಮಂಗಳೂರಿನಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಪಾಸ್ ಕಡ್ಡಾಯ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ನತದೃಷ್ಟ ಬೋಟ್​ನಲ್ಲಿ ಒಟ್ಟು 14 ಮಂದಿಯಿದ್ದರು. ಈ ಪೈಕಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಉಳಿದ 12 ಮಂದಿಯಲ್ಲಿ ಆರು ಮಂದಿಯ ಮೃತದೇಹ ಪತ್ತೆಯಾಗಿದೆ. ಉಳಿದ ಆರು ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.