ಮಂಗಳೂರು : ನಾನು ಯಾವಾಗಲೂ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿರುತ್ತೇನೆ. ಯಾರಾದರೂ ಬಂದು ನನ್ನ ತಲೆಯನ್ನು ಕಡಿಯಬಹುದು ಎಂದು ಮಿಥುನ್ ರೈ ತಮ್ಮ ವಿರುದ್ಧ ಘೋಷಣೆ ಕೂಗಿದವರಿಗೆ ಸವಾಲು ಹಾಕಿದ್ದಾರೆ.
ಜಿಲ್ಲೆಯಲ್ಲಿ ಮತೀಯವಾದಿಗಳ ಅಟ್ಟಹಾಸ ಆರಂಭವಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಎನ್ನಲಾದ ಕೆಲವರು ದಕ್ಷಿಣ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನಮ್ಮ ವಿಚಾರಕ್ಕೆ ಬಂದರೆ ಹುಷಾರ್ ಎಂಬ ಎಚ್ಚರಿಕೆ ನೀಡಿದ್ದರಂತೆ. ಈ ಸಂಬಂಧ ಘೋಷಣೆಯನ್ನೂ ಕೂಗಿದ್ದರಂತೆ. ಈ ಸಂಬಂಧ ಮಾತನಾಡಿರು ರೈ ಈ ಸವಾಲು ಹಾಕಿದ್ದಾರೆ.
ಈ ಸಂಬಂಧ ಮಾತನಾಡಿರುವ ಕಾಂಗ್ರೆಸ್ ಲೋಕಸಭಾ ಚುನಾವಣಾ ಅಭ್ಯರ್ಥಿ ಮಿಥುನ್ ರೈ, ನನ್ನ ಬಲಿದಾನದಿಂದ ಸಮಾಜದಲ್ಲಿ ಮತೀಯವಾದಿಗಳ ಅಟ್ಟಹಾಸ ನಿಲ್ಲುವುದಿದ್ದರೆ ನಾನು ಅದಕ್ಕೆ ಸಿದ್ಧ ಎಂದು ಘೋಷಣೆ ಮಾಡಿದ್ದಾರೆ. ಇಂತಹ ಅವಹೇಳನಕಾರಿ ಈ ಮಾತುಗಳನ್ನ ಇವರು ತಮ್ಮ ಮನೆಯ ಮಗನಿಗೋ, ಮಗಳಿಗೋ ಹೇಳಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಮಿಥುನ್ ರೈ, ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇದನ್ನು ಅರಿತುಕೊಳ್ಳಬೇಕು. ಅಷ್ಟೇ ಅಲ್ಲ ಇಂತಹ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡಬೇಕು. ಪಕ್ಷದ ಕಾರ್ಯಕರ್ತರು ನಾನಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಸಹ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಾನೂ ಕೂಡಾ ಇಂದು ಅಥವಾ ನಾಳೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನನ್ನ ವೈಯಕ್ತಿಕ ನೆಲೆಯಲ್ಲಿ ದೂರು ದಾಖಲಿಸಿಲಿದ್ದೇನೆ. ಕೋಮುಗಲಭೆ ಸೃಷ್ಟಿಸುವ ಯಾವುದೇ ಸಂಘಟನೆ ಇರಲಿ ಅದು ಜನರ ನಡುವೆ ವಿಷ ಬೀಜ ಬಿತ್ತುವ ಸಂದರ್ಭದಲ್ಲಿ ನಾನು ಪ್ರತಿಭಟನೆ ನಡೆಸಲು ಸಿದ್ಧ ಎಂದು ಮಿಥುನ್ ರೈ ಘೋಷಿಸಿದ್ದಾರೆ.