ಮಂಗಳೂರು: ನವ ಮಂಗಳೂರು ಬಂದರಿಗೆ ಹೊಸ ವರ್ಷದ ಮೊದಲ ಪ್ರಸಕ್ತ ಋತುವಿನಲ್ಲಿ ನಾಲ್ಕನೇ ಐಷಾರಾಮಿ ಪ್ರವಾಸಿ ಹಡಗು ಆಗಮಿಸಿದೆ. ಈ ಹೊಸ ವರ್ಷದ ಮೊದಲ ಕ್ರೂಸ್ ಹಡಗು "ದಿ ವರ್ಲ್ಡ್" ಶುಕ್ರವಾರ ಮಧ್ಯಾಹ್ನ 1.30 ಗಂಟೆಗೆ ಆಗಮಿಸಿತು. ಈ ಪ್ರವಾಸಿ ಹಡಗಿನಲ್ಲಿ 123 ಪ್ರಯಾಣಿಕರು ಮತ್ತು 280 ಸಿಬ್ಬಂದಿ ಇದ್ದರು. ಈ ಪ್ರವಾಸಿ ಹಡಗು (ನವ ಮಂಗಳೂರು ಬಂದರು) ಎನ್ ಎಂ ಪಿ ಟಿ ಯ ಬರ್ತ್ ನಂ. 04 ರಲ್ಲಿ ಮೂರು ದಿನಗಳ ಕಾಲ ಉಳಿಯಲಿದ್ದು, 15 ಜನವರಿ 2023 ರಂದು ರಾತ್ರಿ 11 ಗಂಟೆಗೆ ಇಲ್ಲಿಂದ ಹೊರಡಲಿದೆ.
ಮಂಗಳೂರಿಗೆ ಬಂದ ಕ್ರೂಸ್ ಹಡಗಿನಿಂದ ಇಳಿಯುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸಾಂಪ್ರದಾಯಿಕ ರೀತಿಯಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು. ಪ್ರವಾಸಿಗರಿಗೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಹಾಗೂ ಪ್ರಯಾಣಿಕರಿಗೆ ವೈದ್ಯಕೀಯ ತಪಾಸಣೆ, ಕಸ್ಟಮ್ಸ್ ಕೌಂಟರ್‌ಗಳು, ಉಚಿತ ವೈ-ಫೈ, ಬಟ್ಟೆ ಮತ್ತು ಕರಕುಶಲ ಮಳಿಗೆಗಳನ್ನು ಬಂದರಿನಲ್ಲಿ ತೆರೆಯಲಾಗಿದೆ.
![Various activities and cultural programs are arranged for the entertainment of cruise tourists.](https://etvbharatimages.akamaized.net/etvbharat/prod-images/17478372_thumb.jpg)
ಮಂಗಳೂರು ನಗರದ ಸ್ಥಳೀಯ ಮಾರುಕಟ್ಟೆ ಮತ್ತು ಅಂಗಡಿಗಳಿಗೆ ಭೇಟಿ ನೀಡುವ ಪ್ರಯಾಣಿಕರಿಗೆ ಎರಡು ಶಟಲ್ ಬಸ್‌ಗಳು ಸೇರಿದಂತೆ ಸ್ಥಳೀಯ ಪ್ರವಾಸಕ್ಕಾಗಿ ಬಸ್‌ಗಳು, ಕಾರುಗಳು ಮತ್ತು ವ್ಯಾನ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಆಯುಷ್ ಇಲಾಖೆಯು ಕ್ರೂಸ್ ಪ್ರಯಾಣಿಕರ ಅನುಕೂಲಕ್ಕಾಗಿ ಕ್ರೂಸ್ ಲಾಂಜ್‌ನಲ್ಲಿ ಧ್ಯಾನ ಕೇಂದ್ರವನ್ನು ಸ್ಥಾಪಿಸಿದೆ. ಮತ್ತು ಪ್ರವಾಸೋದ್ಯಮ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಮೂರು ದಿನಗಳ ವಾಸ್ತವ್ಯದ ಸಮಯದಲ್ಲಿ ಕ್ರೂಸ್ ಪ್ರವಾಸಿಗರ ಮನರಂಜನೆಗಾಗಿ ವಿವಿಧ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ ಎಂದು ಮಾಹಿತಿ ದೊರೆತಿದೆ.
"ದಿ ವರ್ಲ್ಡ್" ಹಡುಗಿನ ವಿಶೇಷತೆಗಳು : ದಿ ವರ್ಲ್ಡ್ ಎಂಬುದು ಒಂದು ಖಾಸಗಿ ವಸತಿ ಕ್ರೂಸ್ ಹಡಗು ಆಗಿದೆ. ಪ್ರಂಚದ ಅನೇಕ ದೇಶಗಳ ನಿವಾಸಿಗಳು ಈ ಹಡಗಿನಲ್ಲಿ ಪ್ರವಾಸ ಮಾಡುತ್ತಾರೆ. ಹಡಗಿನ ಒಟ್ಟಾರೆ ಉದ್ದವು 196.35 ಮೀಟರ್ ಮತ್ತು ಎತ್ತರ 7.05 ಮೀಟರ್ ವಿದೆ. ಈ ಹಡಗು ಒಟ್ಟು 43,188 ಟನ್ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕೊಚ್ಚಿನ್ ಬಂದರಿಗೆ ಹೋಗುವ ಮಾರ್ಗದಲ್ಲಿ ನೌಕೆಯು ದುಬೈನಿಂದ ನೇರವಾಗಿ ಭಾರತಕ್ಕೆ ಬಂದಿತ್ತು. ಮತ್ತು ಈ ಹಿಂದೆ ಮುಂಬೈ ಮತ್ತು ಮೊರ್ಮುಗೋ ಬಂದರಿನಲ್ಲಿ ನಿಂತಿತ್ತು.
ಪ್ರವಾಸಿಗರು ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ವಿವಿಧ ಪ್ರವಾಸಿ ತಾಣಗಳು, ದೇವಸ್ಥಾನಗಳು, ಚರ್ಚ್‌ಗಳಿಗೆ ಭೇಟಿ ನೀಡಲಿದ್ದಾರೆ. ಹಾಗೂ ಸ್ಥಳೀಯ ಮಾರುಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಹಲವು ವರ್ಷಗಳ ನಂತರ ಬಂದರಿನಲ್ಲಿ ದೀರ್ಘಕಾಲ ತಂಗಿರುವ ಮೊದಲ ವಿಹಾರ ನೌಕೆ ಇದಾಗಿದೆ.
ಆದರಿಂದ ಭರತನಾಟ್ಯ, ಡೊಳ್ಳು ಕುಣಿತ, ಯಕ್ಷಗಾನ ಮತ್ತು ಶ್ರೀಮಂತ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಸ್ಥಳೀಯ ಜಾನಪದ ನೃತ್ಯಗಳಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕ್ರೂಸ್ ಪ್ರವಾಸಿಗರ ಮನರಂಜನೆಗಾಗಿ ಆಯೋಜಿಸಲಾಗಿದೆ. ಕ್ರೂಸ್ ಪ್ರಯಾಣಿಕರು ತಮ್ಮ ಹಡಗಿಗೆ ಹಿಂತಿರುಗುವಾಗ ಮಂಗಳೂರಿಗೆ ಅವರ ಭೇಟಿಯ ನೆನಪಿಗಾಗಿ ಸ್ಮರಣಿಕೆಗಳನ್ನು ಎನ್ ಎಂ ಪಿ ಟಿ ಯಿಂದ ನೀಡಲಾಗುತ್ತಿದೆ.
ಇದನ್ನೂ ಓದಿ :ಯುರೋಪಾ 2: ನವ ಮಂಗಳೂರು ಬಂದರಿಗೆ ಆಗಮಿಸಿದ ಐಷಾರಾಮಿ ಹಡಗು