ETV Bharat / state

'ರೈತರ ಮೇಲೆ ಪ್ರಯೋಗಿಸಿದ ಲಾಠಿ ಚೀನಾ ಗ್ರಾಮ ನಿರ್ಮಾಣ ಮಾಡಿದಾಗ ಎಲ್ಲಿ ಹೋಯಿತು?' - Former minister UT khadar press meet in Mangalore news

ರೈತರನ್ನು ನಿರ್ಲಕ್ಷಿಸಿದರೆ‌ ಅವರು ಸರ್ಕಾರವನ್ನು ಕೆಳಗಿಳಿಸುತ್ತಾರೆ. ದೇಶದ ನೆಲದಲ್ಲಿ ಬಂದು ಕೂತಿರುವ ಚೀನಾದವರನ್ನು ವೈರಿ ರೀತಿಯಲ್ಲಿ ನೋಡದೆ ಜನಸಾಮಾನ್ಯರು, ಕಾರ್ಮಿಕರು, ರೈತರನ್ನು ಸರ್ಕಾರ ವೈರಿ ತರಹ ನೋಡುತ್ತಿದೆ. ಇದನ್ನು ವಿರೋಧಿಸಿ ಗ್ರಾಮಮಟ್ಟದಲ್ಲಿಯೂ ಹೋರಾಟ ನಡೆಯಲಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

former-minister-ut-khadar-press-meet-in-mangalore
ಯು.ಟಿ.ಖಾದರ್ ಪ್ರಶ್ನೆ
author img

By

Published : Jan 22, 2021, 5:29 PM IST

ಮಂಗಳೂರು: ರೈತರ ಪ್ರತಿಭಟನೆ ಹತ್ತಿಕ್ಕಲು ಬಳಸಿದ ಲಾಠಿ ವಾಟರ್ ಜೆಟ್ ಮೊದಲಾದವುಗಳು ಚೀನಾ ನಮ್ಮ ಭೂಮಿಯಲ್ಲಿ ಗ್ರಾಮವನ್ನು ನಿರ್ಮಾಣ ಮಾಡಿದಾಗ ಎಲ್ಲಿ ಹೋಯಿತು ಎಂದು ಮಾಜಿ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿ

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಕಳೆದ ಮೂರು ತಿಂಗಳಿನಿಂದ ದಬ್ಬಾಳಿಕೆ ನಡುವೆಯು ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟೆಲ್ಲ ಕಷ್ಟಪಟ್ಟು ಅವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರೆ ಅವರಲ್ಲಿ ನೋವಿದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ರೈತರನ್ನು ನಿರ್ಲಕ್ಷಿಸಿದರೆ‌ ಅವರು ಸರ್ಕಾರವನ್ನು ಕೆಳಗಿಳಿಸುತ್ತಾರೆ. ದೇಶದ ನೆಲದಲ್ಲಿ ಬಂದು ಕೂತಿರುವ ಚೀನಾದವರನ್ನು ವೈರಿ ತರಹ ನೋಡದೆ ಜನಸಾಮಾನ್ಯರು, ಕಾರ್ಮಿಕರು, ರೈತರನ್ನು ಸರ್ಕಾರ ವೈರಿ ತರಹ ನೋಡುತ್ತಿದೆ. ಇದನ್ನು ವಿರೋಧಿಸಿ ಗ್ರಾಮಮಟ್ಟದಲ್ಲಿಯೂ ಹೋರಾಟ ನಡೆಯಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಆಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಹೇಗೆ ಪ್ರತಿಭಟನೆ ಹತ್ತಿಕ್ಕುತ್ತಿದ್ದರೋ ಅದೇ ರೀತಿ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಕಾಡುತ್ತಿದ್ದು, ಶೀಘ್ರವಾಗಿ ಗೆಸ್ಟ್ ಲೆಕ್ಚರ್ ನೇಮಕ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರವು ಈ ಸಾಲಿನ ವಿದ್ಯಾರ್ಥಿಗಳಿಗೆ ಶೇ 90 ಸಿಲೆಬಸ್ ನೀಡಿದೆ. ಈ ವರ್ಷದ ಅವಧಿ ಕಡಿಮೆ ಇರುವುದರಿಂದ ಇಷ್ಟು ಸಿಲೆಬಸ್ ಪಾಠ ಮಾಡಲು ಶಿಕ್ಷಕರಿಗೆ ಕಷ್ಟ. ವಿದ್ಯಾರ್ಥಿಗಳಿಗೆ ಕಲಿಯಲು ಕಷ್ಟ. ಎಸ್​ಎಸ್​ಎಲ್​ಸಿ‌ ವಿದ್ಯಾರ್ಥಿಗಳ ಮೇಲೆ ಇದು ಪರಿಣಾಮ ಬೀರಲಿದೆ ಎಂದಿದ್ದಾರೆ.

ಇದನ್ನೂ ಓದಿ: ಬಾಗ್ದಾದ್ ಆತ್ಮಾಹುತಿ ದಾಳಿ: ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ ಸಂಘಟನೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.